ಕಾರ್ಪೊರೇಟರ್ ಪತಿಯಿಂದ ಹಿರಿಯ ನಾಗರಿಕರಿಗೆ ಧಮ್ಕಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 5- ಹಿರಿಯ ನಾಗರಿಕರಿಗೆ ಕಾರ್ಪೊರೇಟರ್ ಪತಿ ಧಮ್ಕಿ ಹಾಕಿದ್ದಾರೆ. ಮೈಸೂರಿನ ಮಾಜಿ ಮೇಯರ್ ಹಾಗೂ ಸಿಎಂ ಸಿದ್ದರಾಮಯ್ಯನವರ ಆಪ್ತ 47ನೆ ವಾರ್ಡ್ ಸದಸ್ಯೆ ಸಂಶದ್‍ಬೇಗ ಪತಿ ಆರಿಫ್ ಹುಸೇನ್ ಅವರು ಸಮಸ್ಯೆ ಹೇಳಿಕೊಂಡು ಬಂದ ಹಿರಿಯ ನಾಗರಿಕರೊಬ್ಬರನ್ನು ಬೆದರಿಸಿ ಕಳುಹಿಸಿದ್ದಾರೆ.ಪತ್ನಿ ನಾಮಕಾವಸ್ಥೆ ಸದಸ್ಯೆ. ಪತಿಯದ್ದೇ ಎಲ್ಲ ದರ್ಬಾರ್. ದೂರು-ದುಮ್ಮಾನ ಹೇಳಿಕೊಳ್ಳುವ ನಾಗರಿಕರೊಂದಿಗೆ ಅಸಭ್ಯ ನಡವಳಿಕೆ ಇವರದು ಎಂದು ಆರಿಫ್ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಳೆ ನೀರು ಮನೆಗೆ ನುಗ್ಗುತ್ತಿದೆ, ಈ ಸಮಸ್ಯೆ ಪರಿಹರಿಸಿ ಎಂದು ಹಿರಿಯ ನಾಗರಿಕರೊಬ್ಬರು ಕಾರ್ಪೊರೇಟರ್  ಹತ್ತಿರ ಬಂದರೆ ಅವರ ಪತಿ ಆರಿಫ್ ಹುಸೇನ್ ಉಡಾಫೆ ಉತ್ತರ ಮತ್ತು ಬೆದರಿಕೆ ಉತ್ತರ ನೀಡಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ.ಈ ಏರಿಯಾದ ನಾಗರಿಕರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin