ಕಾಲೇಜಿಗೆ ಚಕ್ಕರ್ ಹಾಕಿ ಪಿಯುಸಿ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ
Exams
ಸಾಂಧರ್ಭಿಕ ಚಿತ್ರ

ಬೆಂಗಳೂರು,ಮಾ.8-ಕಾಲೇಜಿಗೆ ಹಾಜರಾಗದೆ ಚಕ್ಕರ್ ಹೊಡೆದಿದ್ದ ಸುಮಾರು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ  ಬರೆಯುವ ಅವಕಾಶ  ಕಳೆದುಕೊಂಡಿದ್ದಾರೆ . ನಾಳೆಯಿಂದ ಆರಂಭವಾಗಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಸುಮಾರು 4,204 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕಾಲೇಜು ಶಿಕ್ಷಣ ಮಂಡಳಿ ನಿರಾಕರಿಸಿದೆ.   ಈ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ(ಹಾಲ್ ಟಿಕೆಟ್) ನೀಡಬಾರದೆಂದು ಮಂಡಳಿ ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜು ಮಂಡಳಿಗೆ ಕಟ್ಟುನಿಟ್ಟಿನ ಸೂಚ
ಕಾರಣವೇನು:

ಪದವಿಪೂರ್ವ ಶಿಕ್ಷಣ ಮಂಡಳಿಯ ನಿಯಮದಂತೆ ಒಬ್ಬ ವಿದ್ಯಾರ್ಥಿ ಶೈಕ್ಷಣಿಕ ಅವಧಿಯಲ್ಲಿ ಶೇ.75ರಷ್ಟು ಹಾಜರಾತಿ ಇರಬೇಕು. ಆದರೆ ಕೆಲ ವಿದ್ಯಾರ್ಥಿಗಳು ಮನೆಯಲ್ಲಿ ಕಾಲೇಜಿಗೆ ಹೋಗುತ್ತೇನೆ ಎಂದು ತರಗತಿಗೆ ಚಕ್ಕರ್ ಹೊಡೆದಿದ್ದಾರೆ. ಅದರಲ್ಲೂ ಈ ಮೊದಲು ತರಗತಿಗೆ ಗೈರು ಹಾಜರಾದರೆ ಅಂಥವರಿಂದ ದಂಡ ಕಟ್ಟಿಸಿಕೊಂಡು ಪರೀಕ್ಷೆಗೆ ಅವಕಾಶ ನೀಡಲಾಗುತ್ತಿತ್ತು.
ಇದರ ದುರುಪಯೋಗವನ್ನು ತಡೆಗಟ್ಟಲು ಮುಂದಾಗಿರುವ ರಾಜ್ಯ ಸರ್ಕಾರ 1983 ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ಮಾಡಿ ಶೈಕ್ಷಣಿಕ ಅವಧಿಯಲ್ಲಿ ಪ್ರತಿ ವಿದ್ಯಾರ್ಥಿ 75ರಷ್ಟು ಹಾಜರಾತಿ ದಾಖಲಿಸಲಿದ್ದರೆ ಅಂಥವರನ್ನು ಪರೀಕ್ಷೆಗೆ ತಡೆಹಿಡಿಯಬೇಕೆಂಬ ನಿಯಮವನ್ನು ಜಾರಿ ಮಾಡಿತ್ತು. ಅದರ ಪರಿಣಾಮವೇ ಇಂದು 4 ಸಾವಿರಕ್ಕೂ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ನಕಲಿ ಪ್ರವೇಶಪತ್ರ:

ಈವರೆಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದನ್ನು ಕಾಣುತ್ತಿದ್ದೆವು. ಕಳೆದ ವರ್ಷ ಇದು ಸೃಷ್ಟಿಸಿದ ರಾದ್ದಾಂತ ಅಷ್ಟಿಷ್ಟಲ್ಲ. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ಇದೀಗ ನಕಲಿ ಪ್ರವೇಶಪತ್ರವನ್ನೇ ವಿತರಣೆ ಮಾಡಿರುವ ಬಗ್ಗೆ ಕೇಳಿ ಬಂದಿದೆ. ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದ ಹಣ ಪಡೆದು ನಕಲಿ ಹಾಲ್ ಟಿಕೆಟ್ ನೀಡಿರುವ ನಿದರ್ಶನಗಳು ವರದಿಯಾಗಿವೆ.
ಮನೆಯಲ್ಲಿ ಚಕ್ಕರ್ ಹೊಡೆದ ವಿಷಯ ಪೋಷಕರಿಗೆ ತಿಳಿಯಬಹುದೆಂಬ ಭೀತಿಯಿಂದಾಗಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಕೈಕಾಲು ಹಿಡಿದು ಪ್ರವೇಶಪತ್ರ ನೀಡುವಂತೆ ದುಂಬಾಲು ಬಿದ್ದಿದ್ದಾರೆ.  ಕೆಲವುಕಡೆ ವಿದ್ಯಾರ್ಥಿಗಳಿಂದ ಹಣ ಪಡೆದಿರುವ ಪ್ರಾಂಶುಪಾಲರು ನಕಲಿ ಪ್ರವೇಶಪತ್ರವನ್ನು ನೀಡಿದ್ದಾರೆ. ಈಗಾಗಲೇ ಇದಕ್ಕೆ ಸ್ಪಷ್ಟನೆ ನೀಡಿರುವ ಪದವಿಪೂರ್ವ ಶಿಕ್ಷಣ ಮಂಡಳಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಬಿಡಬೇಕು, ಮಂಡಳಿ ನೀಡಿರುವ ಪ್ರವೇಶಪತ್ರ ಹೊರತುಪಡಿಸಿ ಬೇರೆ ಯಾವುದಕ್ಕೂ ಅವಕಾಶ ನೀಡಬಾರದೆಂದು ತಾಕೀತು ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin