ಕಾಲೇಜು ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ ಅದ್ವಿತೀಯ

ಈ ಸುದ್ದಿಯನ್ನು ಶೇರ್ ಮಾಡಿ

ngudu-student-sports
ನಂಜನಗೂಡು, ಆ.24- ಎರಡು ದಿನಗಳ ಕಾಲ ನಡೆದ ತಾಲೂಕು ಮಟ್ಟದ ಪಿಯುಸಿ ವಿಭಾಗದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ 59 ವಿದ್ಯಾರ್ಥಿನಿಯರೂ ಸಹ ಬಹುಮಾನ ಪಡೆದಿರುವುದು ಅದ್ವಿತೀಯ ಸಾಧನೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ನಾಗಮಲ್ಲೇಶ್ ತಿಳಿಸಿದ್ದಾರೆ. ಪಂದ್ಯಾವಳಿಯಲ್ಲಿ 5 ಗುಂಪು ಆಟಗಳಲ್ಲಿ ಕಬ್ಬಡಿ, ವಾಲಿಬಾಲ್ ಮತ್ತು ಬಾಲ್ ಬಾಡ್ಮಿಂಟನ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಥ್ರೋಬಾಲ್ ಮತ್ತು ಖೋಖೋ ಪಂದ್ಯಾವಳಿಗಳಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾರೆ. ಮೇಲಾಟಗಳಲ್ಲೂ ಸಾಧನಗೈದು ಕಾಲೇಜಿನ ಕೀರ್ತಿ ಬೆಳಗಿದ್ದಾರೆ ಎಂದ ಅವರು, ಇವರ ಸಾಧನೆಗೆ ಕಾಲೇಜಿನ ತಂಡದ ವ್ಯವಸ್ಥಾಪಕ ಎಂ.ಎನ್.ಮಹದೇವಯ್ಯ, ತರಬೇತುದಾರ ರಂಜನ್, ಕೋಮಲ, ಕಾಲೇಜಿನ ಉಪನ್ಯಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯವರು ಅಭಿನಂದಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin