ಕಾಲ್ ಸೆಂಟರ್ ಹಗರಣ : ನಾಲ್ವರು ಭಾರತೀಯರು ದೋಷಿ

ಈ ಸುದ್ದಿಯನ್ನು ಶೇರ್ ಮಾಡಿ

Call-Center--01

ವಾಷಿಂಗ್ಟನ್, ಜೂ.6-ಭಾರತೀಯ ಮೂಲದ ಕಾಲ್ ಸೆಂಟರ್‍ಗಳಿಂದ ಹಲವಾರು ಅಮೆರಿಕನ್ನರನ್ನು ವಂಚಿಸಿರುವ ದೊಡ್ಡ ಹಗರಣದಲ್ಲಿ ಬಲೆ ಸಿಕ್ಕಿ ಬೀಳುತ್ತಿರುವವರ ಪಟ್ಟಿ ದೊಡ್ಡದಾಗುತ್ತಲೇ ಇದೆ. ಈ ಮಹಾ ವಂಚನೆಗೆ ಸಂಬಂಧಿಸಿದಂತೆ ನಾಲ್ವರು ಭಾರತೀಯರು ಮತ್ತು ಪಾಕಿಸ್ತಾನದ ಪ್ರಜೆಯೊಬ್ಬನನ್ನು ನ್ಯಾಯಾಲಯವೊಂದು ದೋಷಿಯನ್ನಾಗಿ ಪರಿಗಣಿಸಿದೆ.   ಭಾರತೀಯ ಮೂಲದ ರಾಜುಭಾಯ್ ಪಟೇಲ್ (32), ವಿರಾಜ್ ಪಟೇಲ್ (33), ದಿಲೀಪ್ ಕುಮಾರ್ ಅಂಬಾಲ್ ಪಟೇಲ್ (53) ಮತ್ತು ಹಾರ್ದಿಕ್ ಪಟೇಲ್ (31) ಹಾಗೂ ಪಾಕಿಸ್ತಾನದ ಫಹಾದ್ ಅಲಿ (25) ಅವರು ತಪ್ಪಿತಸ್ಥರು ಎಂದು ಕೋರ್ಟ್ ಘೋಷಿಸಿದೆ.ಟೆಕ್ಸಾಸ್‍ನ ಸದರನ್ ಡಿಸ್ಟ್ರಿಕ್ಸ್‍ನ ಜಿಲ್ಲಾ ನ್ಯಾಯಾಧೀಶರಾದ ಡೇವಿಡ್ ಹಿಟ್ನರ್ ಅವರ ಮುಂದೆ ಈ ಆರೋಪಿಗಳು ಹಣ ದುರ್ಬಳಕೆ ಆರೋಪಗಳ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಕಾಲ್ ಸೆಂಟರ್‍ಗಳ ಮೂಲಕ ಅಮೆರಿಕನ್ನರಿಗೆ ದೂರವಾಣಿ ಕರೆ ಮಾಡಿ ನಕಲಿ ಯೋಜನೆಗಳ ಮೂಲಕ ದೊಡ್ಡ ಮಟ್ಟದ ವಂಚನೆ ಪ್ರಕರಣಗಳಲ್ಲಿ ಇವರು ಶಾಮೀಲಾಗಿದ್ದಾರೆ. ಈ ದೋಷಿಗಳಿಗೆ ಜೈಲು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಶೀಘ್ರದಲ್ಲೇ ತಿಳಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin