ಕಾಳಧನಿಕರಿಗೆ ಮೋದಿ ಶಾಕ್ : ಸೊಗಡು ಶಿವಣ್ಣ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

Modi-025

ತುಮಕೂರು,ನ.9-ರಿಯಲ್ ಎಸ್ಟೇಟ್ ಉದ್ಯಮಿಗಳು, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಪ್ರಧಾನಿ ಮೋದಿಯವರು ಬಿಗ್ ಶಾಕ್ ನೀಡಿದ್ದು , ಇದನ್ನು ಮಾಜಿ ಸಚಿವ ಸೊಗಡು ಶಿವಣ್ಣ ಶ್ಲಾಘಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೂಪಾಯಿ ಕಿಲ್ಲರ್ಸ್ , ಒಟಿಎಸ್(ಒನ್ ಟೈಮ್ ಸೆಟಲ್‍ಮೆಂಟ್) ಶಾಸಕರಿಗೆ ಮತ್ತು ಕಪ್ಪು ಹಣ ಹೊಂದಿರುವವರು, ಭಯೋತ್ಪಾದನೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ಸರಬರಾಜು ಆಗುತ್ತಿದ್ದ ಕಪ್ಪು ಹಣವನ್ನು ತಡೆಗಟ್ಟಲು ನರೇಂದ್ರ ಮೋದಿ ಅವರು ಮಾಸ್ಟರ್ ಪ್ಲಾನ್ ಮಾಡಿದ್ದು , ಇಡೀ ದೇಶದ ನಾಗರಿಕರು ಮೆಚ್ಚುವಂತೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಹಾಗೂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲರೂ ದೇಶವನ್ನು ಲೂಟಿ ಮಾಡಿ ಜನಸಾಮಾನ್ಯರನ್ನು ಕಡೆಗಣಿಸಿ ಶ್ರೀಮಂತರಾಗಿದ್ದಾರೆ. ಸಂಗ್ರಹಿಸಿರುವ ಕಪ್ಪು ಹಣಕ್ಕೆ ಸಂಚಕಾರ ಬಂತಲ್ಲ ಎಂದು ದಿಗಿಲುಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಅವರು ನಕಲಿ ನೋಟುಗಳು ಚಲಾವಣೆಗೆ ಬಂದಾಗ ಇಂತಹ ನಿರ್ಧಾರವನ್ನೇ ಕೈಗೊಂಡಿದ್ದರು ಎಂದು ತಿಳಿಸಿದರು. ನಗರ ಅಧ್ಯಕ್ಷ ಕೆ.ಪಿ.ನಂದೀಶ್, ಶ್ರೀನಿವಾಸ್, ಮಹೇಶ್.ಕೆ, ನಾಗಭೂಷಣ್, ನಾಗರಾಜ್, ಮದನ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin