ಕಾಳಧನಿಕರು, ತೆರಿಗೆ ವಂಚಕರ ಎಲ್ಲ ಮಾರ್ಗಗಳೂ ಬಂದ್ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-jeaity';

ನವದೆಹಲಿ,ನ.10-ಕಪ್ಪು ಹಣವನ್ನು ಮಟ್ಟ ಹಾಕಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತೆರಿಗೆ ವಂಚಕರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ಆರ್ಥಿಕ ತಜ್ಞರೊಂದಿಗೆ ಇಂದು ಸಂವಾದದಲ್ಲಿ ಮಾತನಾಡಿದ ಜೇಟ್ಲಿ , ಕಾಳಧನ, ಖೋಟಾನೋಟು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ನಿಲುವಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಿದರು.  ಕಾಳಧನಿಕರು ತಪ್ಪಿಸಿಕೊಳ್ಳಬಹುದಾದ ಎಲ್ಲ ಮಾರ್ಗಗಳನ್ನು ಸಮರ್ಥವಾಗಿ ಬಂದ್ ಮಾಡಲಾಗಿದೆ. ತೆರಿಗೆ ವಂಚಿಸದಂತೆ ಮತ್ತು ಬೇನಾಮಿ ಹೆಸರಿನಲ್ಲಿ ವಹಿವಾಟು ನಡೆಸುವುದನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ತೆರಿಗೆ ವಂಚಕರು ಪಾರಾಗುವ ಸಾಧ್ಯತೆ ಇಲ್ಲ ಎಂದು ಜೇಟ್ಲಿ ತಿಳಿಸಿದರು.

ಸಾರ್ವಜನಿಕರು ಮುಗಿಬಿದ್ದು ಬ್ಯಾಂಕ್‍ಗಳ ಮುಂದೆ ಜಮಾಯಿಸುವ ಅಗತ್ಯವಿಲ್ಲ. ಅತಿಶೀಘ್ರದಲ್ಲೇ ಈ ಗೊಂದಲ ಬಗೆಹರಿಯಲಿದೆ ಎಂದರು.  ಜಿಎಸ್‍ಟಿ ಕುರಿತು ಮಾತನಾಡಿದ ಅವರು, ಎಲ್ಲ ರಾಜ್ಯಗಳ ಒಮ್ಮತದೊಂದಿಗೆ ಈ ಹೊಸ ಆರ್ಥಿಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಜೇಟ್ಲಿ ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin