ಕಾಳಿ ನದಿಯಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದ ಇಬ್ಬರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Karwar--01

ಕಾರವಾರ, ಡಿ.26- ಪ್ರವಾಸಕ್ಕೆ ಬಂದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಾಂಡೇಲಿ ಸಮೀಪದ ಮಾವಳಿಂಗ ಗ್ರಾಮದ ಕಾಳಿ ನದಿಯಲ್ಲಿ ನಡೆದಿದೆ. ಧಾರವಾಡದ ಮಾಳಾಪುರದ ಪದ್ಮಪ್ರಿಯ ಅರುಣ ಪಾಟೀಲ (23), ಮದಿಹಾಳದ ರಜನಿ ಆನಂದ ಪಾಟೀಲ (21) ಮೃತಪಟ್ಟ ದುರ್ದೈವಿಗಳು.  ಧಾರವಾಡದಿಂದ ಪ್ರವಾಸಕ್ಕೆಂದು 13 ಮಂದಿ ಬಂದಿದ್ದು, ಈ ವೇಳೆ ಕಾಳಿ ನದಿಯಲ್ಲಿ ಈಜಾಡಲು ಇಳಿದಿದ್ದಾರೆ. ಈ ವೇಳೆ ನೀರಿನ ಆಳ ತಿಳಿಯದೆ ಮುಂದೆ ಹೋಗಿದ್ದರಿಂದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin