ಕಾವೇರಿಗಾಗಿ ಮುಸ್ಲಿಮರ ಪ್ರಾರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

kanakapura

ಕನಕಪುರ, ಸೆ.14-ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಹಾಗು ಸುಪ್ರಿಂಕೋರ್ಟ್‍ನ ತೀರ್ಪಿನ ವಿರುದ್ಧ ತಾಲ್ಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿಯಲ್ಲಿ ಕಾವೇರಿ ಕಿಚ್ಚಿನ ಹೋರಾಟ ಮಂಗಳವಾರವೂ ಮುಂದುವರೆಯಿತು. ಕರ್ನಾಟಕ ರಕ್ಷಣಾಸೇನೆ ಪದಾಧಿಕಾರಿಗಳು, ಮುಸ್ಲಿಂ ಯೂತ್ ಅಸೋಸಿಯೇಷನ್‍ನವರು ಹೋರಾಟ ಬೆಂಬಲಿಸಿ ಮುಖ್ಯರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಆಂಜನಪ್ಪ, ಮುಸ್ಲಿಂ ಯೂತ್ ಅಸೋಸಿಯೇಷನ್ ಅಧ್ಯಕ್ಷ ಇಮ್ರಾನ್‍ಖಾನ್, ಕಾರ್ಯದರ್ಶಿ ನಿಯಾಮತ್‍ವುಲ್ಲ, ಜಹೀರ್‍ಬೇಗ್, ಅತೀಫ್‍ವುಲ್ಲ, ನಯೀಂಪಾಷ, ರುಹುಲ್ಲಾ, ಜಫ್ರು ಸೇರಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಶೇಷ ಪ್ರಾರ್ಥನೆ:

ಬಕ್ರಿದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಚಿಕ್ಕಮಸೀದಿ ಮತ್ತು ಜಮ್ಮು ಮಸೀದಿ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಾವೇರಿ ವಿವಾದ ಇತ್ಯರ್ಥವಾಗಿ ವರುಣನ ಕೃಪೆ ಫಲಿಸುವಂತೆ ವಿಶೇಷವಾಗಿ ಪ್ರಾರ್ಥಿಸಿದರು. ಧರ್ಮಗುರುಗಳಾದ ಇದ್ರಿಕ್ ಅಹ್ಮದ್‍ರವರ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin