ಕಾವೇರಿ ಅನ್ಯಾಯ : ಮೈಸೂರು ಮೇಯರ್ ಭೈರಪ್ಪ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru-01

ಮೈಸೂರು, ಸೆ.13- ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದರಿಂದ ನಾನು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಹಾನಗರ ಪಾಲಿಕೆ ಮೇಯರ್ ಭೈರಪ್ಪ ತಿಳಿಸಿದ್ದಾರೆ. ಪ್ರಸ್ತುತ ವಿದೇಶದಲ್ಲಿರುವ ಭೈರಪ್ಪ ಅವರು ಮಾಧ್ಯಮದವರಿಗೆ ಟ್ವೀಟ್ ಮಾಡಿದ್ದು, ನಾನು ಸದ್ಯಕ್ಕೆ ಮೈಸೂರಿನಲ್ಲಿಲ್ಲ, ನೆದರ್ಲ್ಯಾಂಡ್‍ನ ಹೇಗ್ ನಗರದಲ್ಲಿ ನಡೆಯುತ್ತಿರುವ ಮೇಯರ್ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಳ್ಳಲು ಪೂರ್ವ ನಿಗದಿಯಂತೆ ಸೆ.8ರಂದು ಇಲ್ಲಿಗೆ ಆಗಮಿಸಿದ್ದೇನೆ ಎಂದು ತಿಳಿಸಿದ್ದಾರೆ.  ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಮುಂದುವರೆದಿದ್ದು, ಹೆಚ್ಚುವರಿ ನೀರು ಬಿಡುವ ತೀರ್ಪಿನ ಬಗ್ಗೆ ತಿಳಿದುಬಂದಿದೆ.

ಹಾಗಾಗಿ ಇದನ್ನು ಖಂಡಿಸಿ ನಾನು ತನ್ನ ಪದವಿಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ಸೆ.16ರಂದು ಬೆಳಗ್ಗೆ 10.30ಕ್ಕೆ ನಾನು ಮೈಸೂರಿಗೆ ಆಗಮಿಸಿದ ನಂತರ ರಾಜೀನಾಮೆ ಸಲ್ಲಿಸುತ್ತೇನೆ.ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೂ ನಮ್ಮೆಲ್ಲರ ಶಾಂತಿಯುತ ಹೋರಾಟ ಮುಂದುವರಿಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆ ಹಿತ ಕಾಯಲು ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin