ಕಾವೇರಿ ಎಫೆಕ್ಟ್ : ಮೈಸೂರಿನಲ್ಲಿ ಪ್ರವಾಸಿಗರ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

MNy-sususudvbkjdzvdznbxgvzs

ಮೈಸೂರು,ಸೆ.14-ಹಲವಾರು ದಿನಗಳಿಂದ ನಡೆಯುತ್ತಿರುವ ಬಂದ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು , ಸಾವಿರಾರು ವ್ಯಾಪಾರಸ್ಥ ಕುಟುಂಬಗಳ ಮೇಲೆ ಇದರ ಪರಿಣಾಮ ಬೀರಿದೆ. ಮೈಸೂರಿನಾದ್ಯಂತ ಹೋಟೆಲ್ ಉದ್ಯಮಿಗಳು, ರಸ್ತೆಬದಿಯ ವ್ಯಾಪಾರಿಗಳು, ಅಂಗಡಿಮುಗಟ್ಟುಗಳಿದ್ದು , ಇಲ್ಲಿಗೆ ಪ್ರವಾಸಿಗರು ಬರದೆ ಇರುವುದರಿಂದ ಜೀವನ ನಡೆಸಲು ದುಸ್ತರವಾಗಿದೆ. ಅದರಲ್ಲೂ ಕಾವೇರಿ ವಿವಾದ ಉಂಟಾಗಿನಿಂದಲೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ. ಅಲ್ಲದೆ ಗೌರಿ-ಗಣೇಶ ಹಬ್ಬ, ಬಕ್ರೀದ್ ಹಬ್ಬಗಳಿಂದ ಸಾಲು ಸಾಲು ರಜೆಗಳ ಅಕ್ಕಪಕ್ಕದ ರಾಜ್ಯಗಳಿಂದ ಆಗಮಿಸದ ಪ್ರವಾಸಿಗರು ಹೋಟೆಲ್‍ಗಳಲ್ಲಿ ರೂಮ್ ಬುಕ್ ಮಾಡಿದ್ದರು. ಆದರೆ ಪ್ರತಿದಿನ ಪ್ರತಿಭಟನೆ ಬಂದ್‍ನಿಂದಾಗಿ ಹೋಟೆಲ್‍ಗಳಲ್ಲಿ ಮೈಸೂರಿಗೆ ಬರಲು ಆಗದೆ ರೂಮ್‍ಗಳನ್ನು ರದ್ದುಗೊಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ದಸರಾ ಸಂದರ್ಭದಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ಪ್ರವಾಸಿಗರು ಮೈಸೂರಿಗೆ ಬರಲುಕಡಿಮೆಯಾಗುತ್ತಿದೆ. ಈ ವರ್ಷದಲ್ಲಾದರೂ ಅದ್ಧೂರಿ ಮೈಸೂರು ದಸರಾ ನಡೆಯಲಿದೆ ಎಂದು ಹೋಟೆಲ್ ಉದ್ಯಮಿಗಳು ವಿನೂತನ ಯೋಜನೆಗಳನ್ನುಹಮ್ಮಿಕೊಂಡಿದ್ದರು. ಇತ್ತೀಚೆಗೆ ನಡೆಯುತ್ತಿರವ ಬಂದ್, ಪ್ರತಿಭಟನೆಗಳಿಂದ ಪ್ರವಾಸಿಗರಲ್ಲಿ ಆತಂಕವುಂಟಾಗಿದ್ದು, ಇಲ್ಲಿಗೆ ಆಗಮಿಸುವವರ ಸಂಖ್ಯೆ ಇಳಿಮುಖವಾಗಿದೆ. ಹೋಟೆಲ್ ಸಂಘದವರು, ಮಾಲೀಕರು ಈ ಸಮಸ್ಯೆಯನ್ನು ಬಗೆಹರಿಸಿ ಪ್ರವಾಸೋದ್ಯಮ ಅಭಿವೃದ್ದಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಿ ಎಂದು ಒಕ್ಕೋರಲ ಮನವಿಯನ್ನು ಸರ್ಕಾರಕ್ಕೆ ನೀಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin