ಕಾವೇರಿ ಎಫೆಕ್ಟ್ : ಮೈಸೂರು ದಸರಾಗೆ ಪ್ರವಾಸಿಗರ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

dasara

ಮೈಸೂರು,ಅ.06- ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಾರಂಭವಾಗಿ ಐದು ದಿನಗಳು ಕಳೆದರೂ ಈ ಬಾರಿ ಪ್ರವಾಸಿಗರ ಸಂಖ್ಯೆ ಕ್ಷಿಣಿಸಿದ್ದು, ಕಾವೇರಿ ಜಲ ವಿವಾದ ದಸರಾ ಸಂಭ್ರಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾವೇರಿ ಕುರಿತ ಹೋರಾಟ, ಪ್ರತಿಭಟನೆಗಳು ಮೈಸೂರು-ಮಂಡ್ಯ ಭಾಗದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದೇಶಿಗರು, ಪ್ರವಾಸಿಗರು ಮೈಸೂರು ದಸರಾ ವೀಕ್ಷಣೆಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ ದೇಶದ ನಾನಾ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದರು. ನಗರದ ಬಹುತೇಕ ಹೋಟೆಲ್‍ಗಳು, ವಸತಿ ಗೃಹಗಳು ಬುಕ್ ಆಗಿದ್ದವು. ಹೋಟೆಲ್ ಉದ್ಯಮಿಗಳು ಪ್ರವಾಸಿಗರನ್ನು ಆಕರ್ಷಿಲು ಶೇ. 30ರಷ್ಟು ರಿಯಾಯಿತಿ ಘೋಷಿಸಿದ್ದರೂ ಪ್ರವಾಸಿಗರ ಸಂಖ್ಯೆ ಅತ್ಯಲ್ಪ.

ಮೈಸೂರು ಸುತ್ತಲಿನ ಪ್ರದೇಶಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರನ್ನು ಆಕರ್ಷಿಸಲು ಕೆಎಸ್‍ಆರ್‍ಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ವಿವಿಧ ಯೋಜನೆಗಳನ್ನು ರೂಪಿಸಿದ್ದರೂ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ. ಮೈಸೂರಿನಲ್ಲಿರುವ ಹಲವು ಅರಮನೆಗಳನ್ನು ವೀಕ್ಷಿಸಲು ವೀಲ್ ಆನ್ ಪ್ಯಾಲೇಸ್ ಎಂಬ ನೂತನ ಯೋಜನೆ ಪರಿಚಯಿಸಲಾಗಿದ್ದು ಇದಕ್ಕೂ ಪ್ರವಾಸಿಗರು ಸಂದಿಸುತ್ತಿಲ್ಲ. ಕಳೆದ ಬಾರಿ ಯಾವುದೇ ಯೋಜನೆಗಳಿಲ್ಲದಿಂದರೂ ಪ್ರವಾಸಿರ ಸಂಖ್ಯೆ ಹೆಚ್ಚಾಗಿತ್ತು. ಅದರೆ ಈ ಬಾರಿ ರಾಜ್ಯದಲ್ಲಿ ಉಂಟಾದ ಕಾವೇರಿ ಹೋರಾಟಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಮೈಸೂರು ದಸರಾಗೂ ಸಹ ಬಿಸಿ ತಾಕಿದೆ. ಇದರಿಂದ ಹೋಟೆಲ್ ಉದ್ಯಮಿಗಳಿಗೂ ಸಹ ತೀವ್ರ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin