ಕಾವೇರಿ ಗಲಭೆ : ಮತ್ತೆ 24 ಜನರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Kaveri-0002

ಪಾಂಡವಪುರ,ಅ.18-ಕಾವೇರಿ ವಿಷಯದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 24 ಯುವಕರನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಅಡ್ಡಿ ಮಾಡಿದರು ಎಂಬ ಆಪಾದನೆ ಮೇಲೆ ಕಳೆದ ರಾತ್ರಿ ಗ್ರಾಮದ ಮನೆಗಳಿಗೆ ನುಗ್ಗಿ ಯುವಕರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ತಾಲ್ಲೂಕಿನ ಹಿರೇಮರಳಿ, ಹಾರೋಹಳ್ಳಿ, ಪಾಂಡವಪುರ ಟೌನ್, ಬೀರಶೆಟ್ಟಹಳ್ಳಿ ಮತ್ತು ಬನಘಟ್ಟ ಗ್ರಾಮದಲ್ಲಿ ಪೊಲೀಸರ ಈ ಕ್ರಮ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ 70 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಈಗ ಮತ್ತೆ 24 ಮಂದಿಯನ್ನು ಬಂಧಿಸಿರುವುದು ರೈತ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin