ಕಾವೇರಿ ಗಲಾಟೆ : ಹೊರರಾಜ್ಯಗಳಿಗೆ ತೆರಳುವವರಿಗೆ ಏರ್ ಏಷಿಯಾ ವಿಮಾನದಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Air-Aisa

ಬೆಂಗಳೂರು, ಸೆ.13- ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವುದರಿಂದಾಗಿ ಬೆಂಗಳೂರಿನಿಂದ ಹೊರರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಸಂಕಷ್ಟ ಪರಿಸ್ಥಿತಿಯ ಸಂದರ್ಭ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಏರ್ ಏಷಿಯಾ ಸಂಸ್ಥೆ ಪ್ರಯಾಣಿಕರು ಉಚಿತವಾಗಿ ತಮ್ಮ ವಿಮಾನಗಳಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟಿದೆ. ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ವಿಮಾನಗಳಲ್ಲಿ (ಸೆ.13) ಇಂದು ಪ್ರಯಾಣಿಕರನ್ನು ಯಾವುದೇ ಚಾರ್ಜ್ ತೆಗೆದುಕೊಳ್ಳದೆ ಕರೆದೊಯ್ಯಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಪ್ರಯಾಣಿಕರ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಸನ್ನಿವೇಶ ಗಂಭೀರವಾಗಿದ್ದು, ನಮ್ಮ ಮಾಮೂಲಿ ಗ್ರಾಹಕರು ಇಲ್ಲಿಂದ ತೆರಳಬಹುದು. ಅವರಿಗೆ ಯಾವುದೇ ಚಾರ್ಜ್ ತೆಗೆದುಕೊಳ್ಳುವುದಿಲ್ಲ ಎಂದು ಸಂಸ್ಥೆ ನಿರ್ದೇಶಕರು ಹೇಳಿದ್ದಾರೆ.  ಬಸ್‍ಗಳು, ರೈಲುಗಳು ಸಂಚಾರದಲ್ಲಿ ವ್ಯತ್ಯಯವುಂಟಾಗಿರುವುದರಿಂದ ಈ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ನಮ್ಮ ಪ್ರಯಾಣಿಕರು ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin