ಕಾವೇರಿ ತೀರ್ಪು : ಕರುನಾಡಿಗೆ ಕರುಣೆ ತೋರದ ಸುಪ್ರೀ ಕೋರ್ಟ್, ಮತ್ತೆ ಅನ್ಯಾಯ (Live)

ಈ ಸುದ್ದಿಯನ್ನು ಶೇರ್ ಮಾಡಿ

Supreme

ಬೆಂಗಳೂರು, ಸೆ.20- ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿದೆ. ಸೆ.27ರವರೆಗೆ ಪ್ರತಿದಿನ ಆರು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಉದಯ್ ಲಲಿತ್ ಮತ್ತು ದೀಪಕ್ ಮಿಶ್ರಾ ಅವರನ್ನೊಳ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ಕರ್ನಾಟಕಕ್ಕೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೀರು ಬಿಡುವ ಜೊತೆಗೆ ನಾಲ್ಕುವಾರದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆಯೂ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಸೆ.27ರವರೆಗೂ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್‍ನಂತೆ ಒಟ್ಟು 42 ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಇಕ್ಕಟ್ಟಿಗೆ ರಾಜ್ಯ ಸರ್ಕಾರ ಸಿಲುಕಿದೆ.

ಕಾವೇರಿ ನದಿ ನೀರಿನ ಹಂಚಿಕೆಯನ್ನು ಮೇಲುಸ್ತುವಾರಿ ಸಮಿಗೆ ಬಿಡಬೇಕು, ಯಾವುದೇ ಕಾರಣಕ್ಕೂ ಮತ್ತೊಂದು ತಾತ್ಕಾಲಿಕ ಆದೇಶ ನೀಡಬಾರದು ಎಂದು ಕರ್ನಾಟಕದ ಪರ ವಕೀಲರಾದ ಫಾಲಿ ಎಸ್.ನಾರಿಮನ್ ವಾದಿಸಿದರು.   ಸುಪ್ರೀಂಕೋರ್ಟ್ ಆದೇಶದಂತೆ ಈಗಾಗಲೇ ತಮಿಳುನಾಡಿಗೆ ಸಾಕಷ್ಟು ನೀರು ಹರಿಸಲಾಗಿದೆ. ಮತ್ತೆ ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ಕಾವೇರಿ ನದಿ ಪಾತ್ರದ ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಸೇರಿ ನಾಲ್ಕು ಜಲಾಶಯಗಳಲ್ಲಿ 27 ಟಿಎಂಸಿಗಿಂತಲೂ ಕಡಿಮೆ ನೀರಿದೆ. ಈ ಮೊದಲು 40 ಟಎಂಸಿಗಿಂತಲೂ ಕಡಿಮೆ ನೀರಿದ್ದಾಗ ಸೆ.5ರಂದು ಸುಪ್ರೀಂಕೋರ್ಟ್ ಆದೇಶ ನೀಡಿ 10 ದಿನ ಕಾಲ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಆದೇಶಿಸಿತ್ತು. ಸೆ.10ರಂದು ಪರಿಷ್ಕತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 15 ಸಾವಿರ ಕ್ಯೂಸೆಕ್ಸ್‍ನ್ನು 13 ಕ್ಯೂಸೆಕ್ಸ್‍ಗೆ ಇಳಿಸಿತ್ತಾದರೂ, ಹತ್ತು ದಿನಗಳ ಬದಲಿಗೆ 13 ದಿನ ನೀರಬಿಡಬೇಕು ಎಂದು ಆದೇಶಿಸಿದೆ. ಇದರಿಂದ 1.50 ಲಕ್ಷ ಕ್ಯೂಸೆಕ್ಸ್ ಬದಲಿಗೆ 1.68 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತಾಗಿತ್ತು. ಸಂಕಷ್ಟದ ಸಮಯದಲ್ಲೂ ಕರ್ನಾಟಕ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ಸೆ.20ರವರೆಗೆ ನೀರು ಹರಿಸಿದೆ. ಎಂದು ನಾರಿಮನ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದಲ್ಲಿ ಮಳೆಯ ಕೊರತೆಯಿದೆ. ಸದ್ಯಕ್ಕೆ ಮಳೆಯಾಗುವ ಲಕ್ಷಣಗಳಿಲ್ಲ, ಇದು ಸಂಕಷ್ಟದ ವರ್ಷ ಎಂದು ನಿನ್ನೆ ಪರಿಸ್ಥಿತಿಯ ಅವಲೋಕನ ನಡೆಸಿದ ಮೇಲುಸ್ತುವಾರಿ ಸಮಿತಿಯೇ ಅಭಿಪ್ರಾಯ ಪಟ್ಟಿದೆ. ಮೇಲುಸ್ತುವಾರಿ ಸಮಿತಿಯ ತಜ್ಞರ ತಂಡ ವರದಿ ನೀಡುವವರೆಗೂ ಕಾಯಬೇಕು. ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಮುಂದಿನ ವರ್ಷದ ಜೂನ್ ತಿಂಗಳ ವರೆಗೂ ಮಂಡ್ಯ, ಮೈಸೂರು, ಬೆಂಗಳೂರು ನಗರಗಳು ಮತ್ತು 600 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 20 ಟಿಎಂಸಿ ನೀರಿನ ಅಗತ್ಯ ಇದೆ. ಇನ್ನೂ ಕಾವೇರಿ ನದಿ ಪಾತ್ರದಲ್ಲಿ ಈಗಾಗಲೇ ಬಿತ್ತನೆಯಾಗಿರುವ ಭತ್ತದ ಬೆಳೆಯನ್ನು ಉಳಿಸಿಕೊಳ್ಳಲು 64 ಟಿಎಂಸಿಗೂ ಹೆಚ್ಚಿನ ನೀರು ಬೇಕು. ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ಈ ಮೊದಲೆ 36 ಟಿಎಂಸಿ ನೀರು ದಾಸ್ತಾನಿತ್ತು. ನ್ಯಾಯಾಲಯದ ತೀರ್ಪಿನಿಂದ ಕರ್ನಾಟಕ ನೀರು ಬಿಟ್ಟಿರುವುದರಿಂದ ಅಲ್ಲಿ 50 ಟಿಎಂಸಿಗಿಂತಲೂ ಹೆಚ್ಚು ನೀರು ಸಂಗ್ರಹವಾಗಿದೆ. ಅಲ್ಲಿನ ಸಾಂಬಾ ಬೆಳೆಗೆ ಸದ್ಯಕ್ಕೆ ನೀರಿನ ಅಗತ್ಯವಿಲ್ಲ. ಮುಂದಿನ ಬೆಳೆಯ ವೇಳೆಗೆ ಅಕ್ಟೋಬರ್‍ನಲ್ಲಿ ಈಶಾನ್ಯ ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ತಮಿಳುನಾಡಿಗೆ ಬೇಕಾದಂತೆ ತೀರ್ಪು ನೀಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಅನಾನುಕೂಲವಾದಂತೆ ತೀರ್ಪು ನೀಡಬಾರದು ಎಂದು ನಾರಿಮನ್ ವಾದಿಸಿದರು. ಕರ್ನಾಟಕದ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಕೂಡ ವಾದಿಸಿ ನಿನ್ನೆ ಮೇಲುಸ್ತುವಾರಿ ಸಮಿತಿ ಮೂರು ಸಾವಿರ ಕ್ಯೂಸೆಕ್ಸ್ ನೀರನ್ನು 10 ದಿನ ಹರಿಸಬೇಕು ಎಂದು ಹೇಳಿದೆ. ಇದರಲ್ಲೂ ಅನ್ಯಾವಾಗಿದೆ. ನಾವು ಇದನ್ನೂ ಪ್ರಶ್ನಿಸುತ್ತಿದ್ದೇವೆ ಮತ್ತು ಕಾವೇರಿ ನ್ಯಾಯಾಧಿಕರಣದ ತೀರ್ಪಿನಿಂದಲೂ ನಮಗೆ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿದರು. ಕರ್ನಾಟಕದ ಪರ ಇಬ್ಬರು ವಕೀಲರು ವಾದಿಸಿದ್ದನ್ನು ತಮಿಳುನಾಡು ಪರ ವಕೀಲರು ವಿರೋಧಿಸಿದರು. ಅದೇ ರೀತಿ ಈ ವರ್ಷ ಸಂಕಷ್ಟ ಪರಿಸ್ಥಿತಿ ಇದೆ ಎಂಬುದನ್ನು ತಮಿಳುನಾಡು ಪರ ªಕೀಲರು ಒಪ್ಪದೆ ಆಕ್ಷೇಪಿಸಿದರು. ಕಾವೇರಿ ನ್ಯಾಯಾಧಿಕರಣ ತೀರ್ಪಿನಂತೆ ತಮಿಳುನಾಡಿಗೆ ಜೂನ್‍ನಿಂದ ಸೆಪ್ಟಂಬರ್ ವೇಳೆಗೆ 94 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ 30 ಟಿಎಂಸಿ ನೀರು ಮಾತ್ರ ಹರಿದು ಬಂದಿದೆ. ಇನ್ನೂ 64 ಟಿಎಂಸಿ ನೀರು ಬಿಡಬೇಕಿದ್ದು, ನಮ್ಮ ಪಾಲಿನ ನೀರನ್ನು ನಮಗೆ ಹರಿಸಿ ಎಂದು ವಾದಿಸಿದರು. ಹಿಂದೆಂದಿಗಿಂತಲೂ ಬಿರುಸಾಗಿ ಇಂದು ಸುಪ್ರೀಂಕೋರ್ಟ್ ಮುಂದೆ ವಾದ ವಿವಾದಗಳು ನಡೆದವು.

ನಾಳೆ ತುರ್ತು ಸಚಿವ ಸಂಪುಟ ಕರೆದ  ಮುಖ್ಯಮಂತ್ರಿ ಸಿದ್ದರಾಮಯ್ಯ

Updates Awaiting ….

Facebook Comments

Sri Raghav

Admin