ಕಾವೇರಿ ನೀರಿಗಾಗಿ ನಂಜನಗೂಡು ಬಂದ್ ಅಭೂತಪೂರ್ವ ಯಶಸ್ಸು

ಈ ಸುದ್ದಿಯನ್ನು ಶೇರ್ ಮಾಡಿ

 

nanjanagudu

ನಂಜನಗೂಡು, ಸೆ – 09  ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರ ಧೋರಣೆಯನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ಹಿನ್ನೇಲೆಯಲ್ಲಿ ನಂಜನಗೂಡು ಬಂದ್ ಅಭೂತ ಪೂರ್ವ 100ಕ್ಕೆ 100ರಷ್ಟು ಯಶಸ್ವಿಯಾಗಿದೆ. ಶುಕ್ರವಾರ ಬೆಳಗ್ಗಿನಿಂದಲೇ ಅಗತ್ಯ ವಸ್ತುಗಳಾದ ಹಾಲು, ಮೆಡಿಕಲ್ ಸ್ಟೋರ್, ಆಸ್ಪತ್ರೆಗಳನ್ನು ಹೊರತು ಪಡಿಸಿ ಬಹುತೇಕ ಎಲ್ಲಾ ಅಂಗಡಿ-ಮುಗ್ಗಟ್ಟುಗಳು ಹಾಗೂ ವಾಣಿಜ್ಯ ಕೇಂದ್ರಗಳು, ಹೋಟೆಲ್‍ಗಳು, ಚಿತ್ರ ಮಂದಿರಗಳು, ಜವಳಿ ಮತ್ತು ವರ್ತಕರು, ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು ಸೇರಿದಂತೆ ಎಲ್ಲಾ ವಹಿವಾಟುಗಳು ಸ್ವಪ್ರೇರಣೆಯಿಂದಲೆ ಬಂದ್ ಆಚರಿಸದವು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳು ರಜೆ ಘೋಷಿಸಲಾಗಿತ್ತು.
ಖಾಸಗಿ ವಾಹನಗಳಾದ ಮ್ಯಾಕ್ಸಿಕ್ಯಾನ್, ಆಟೋ, ಖಾಸಗಿ ಬಸ್ಸ್ , ರಸ್ತೆಗಿಳಿಯಲಿಲ್ಲಾ, ಪೆಟ್ರೋಲ್ ಬಂಕ್, ಕಾರ್ಖಾನೆಗಳು, ಬ್ಯಾಂಕ್, ಜೀವಾ ವಿಮಾ ನಿಗಮ, ಚಿತ್ರಮಂದಿರ, ಹೋಟೆಲ್‍ಗಳು ಮುಚ್ಚಿದ್ದವು. ಶುಕ್ರವಾರದ ಸಂತೆ ಕೂಡ ನಡೆಯಲಿಲ್ಲ.ವಿವಿಧ ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷ ಪಕ್ಷದ ಮುಖಂಡರು, ಕಾರ್ಮಿಕ ಸಂಘಟನೆಗಳು, ರೈತ ಸಂಘ ದಲಿತ ಸಂಘರ್ಷ ಸಮಿತಿ, ಬಿ.ಎಸ್.ಪಿ, ಮುಸ್ಲಿಂ ಸಂಘಟನೆಗಳು ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಬೆಳಿಗ್ಗೆಯಿಂದಲೇ ಬೈಕ್ ರ್ಯಾಲಿ, ಮಾನವ ಸರಪಳಿ, ರಸ್ತೆತಡೆ, ಜಯಲಲಿತಾರವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದವು.

 

 

ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆಬಿಜೆಪಿ ಪಕ್ಷದ ಮುಖಂಡರು ಹುಲ್ಲಹಳ್ಳಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಕೂಗಿದರಲ್ಲದೇ ಪಾದಯಾತ್ರೆ ಮೂಲಕ ತಾಲ್ಲೂಕು ಕಚೇರಿ ಬೇಟಿ ನೀಡಿ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಗ್ರಾಮಾಂತರ ಉಫಾದ್ಯಕ್ಷ ಜಯದೇವ್, ಉಫಾದ್ಯಕ್ಷ ಎಸ್, ಮಹದೇವಯ್ಯ, ಜಿ.ಪಂ,ಸದಸ್ಯ ಹೆಜ್ಜಿಗೆ ಹೆಚ್,ಎಸ್,ದಯಾನಂದಮೂರ್ತಿ, ತಾಲ್ಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ವಿನಯ್‍ಕುಮಾರ್, ತಾ.ಪಂ,ಸದಸ್ಯ ಸವಿತಾರಂಗನಾಥ್, ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷ ಇಲಿಯಾಸ್ ಅಹಮದ್, ನಗರಸಭಾ ಸದಸ್ಯರುಗಳಾದ ಆನಂದ್, ಮಂಗಳ, ಪ್ರದೀಪ್ ಪ್ರಧಾನ ಕಾರ್ಯಧರ್ಶಿಗಳಾದ ಎನ್.ಸಿ, ಬಸವಣ್ಣ, ಸ್ವಾಮಿ, ಕೇಬಲ್ ಸಿದ್ದರಾಜು, ಮಾಜಿ ಜಿ.ಪಂ,ಸದಸ್ಯ ಸಿಂಧುವಳ್ಳಿ ಎಸ್.ಎಂ,ಕೆಂಪಣ್ಣ, ಕಿರಣ್ ನಾಯಕ್, ಕೆ.ಎಸ್,ಮಹೇಶ್‍ಕುಮಾರ್, ಹಗಿನವಾಳು ಸುರೇಶ್

 

 

ಶಿವುಮೂರ್ತಿನಾಯಕ್, ಶಾಂತಕುಮಾರ್, ಕಪ್ಪುಸೋಗೆ ರವೀಂದ್ರಕೃಷ್ಣಪ್ಪಗೌಡ, ಹೊರಳವಾಡಿ ಪುಟ್ಟಸ್ವಾಮಿ, ಸಿಂಧುವಳ್ಳಿ ಅಶೋಕ್, ಗಾಯಿತ್ರಿ, ಪಾತ್ರೆ ಮಂಜು, ಹೆಚ್,ಎಸ್,ಗಿರಿಧರ್, ಉಮೇಶ್‍ಮೋದಿ, ಮಸಗೆರಾಜು, ಅಕ್ಕ ಬಳಗದ ಅಧ್ಯಕ್ಷೆ ಚಿನ್ನತಾಯಮ್ಮ, ಕಾರ್ಯದರ್ಶಿ ಮಂಜುಳಮಧು ಹಾಗೂ ಪದಾಧಿಕಾರಿಗಳು ಕದಂಬ ಕನ್ನಡ ಸೇನೆ, ಬಸವಣ್ಣ, ಕರವೇ ಶಿವರಾಮೇಗೌಡ ಬಣದ ತಾಲ್ಲೂಕಾಧ್ಯಕ್ಷ ಎನ್.ರವಿಕುಮಾರ್‍ಗೌಡ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.ಜೆಡಿಎಸ್ ಪಕ್ಷದಿಂದ ಧರಣಿ,ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಳಲೆ ಕೇಶವಮೂರ್ತಿ, ನೇತೃತ್ವದಲ್ಲಿ ಧರಣಿ ನಡೆಸಿದರು. ಇದೇ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ನರಸಿಂಹಸ್ವಾಮಿ, ನಗರಸಭಾ ಸದಸ್ಯರಾದ ರಾಜೇಶ್, ಮಂಜುನಾಥ್, ಚೆಲುವಪ್ಪ, ಶೇಷಾದ್ರಿ, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.ರೈತ ಸಂಘ, ಹಸಿರುಸೇನೆ, ದಸಂಸಸಂಯುಕ್ತವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ವಿದ್ಯಾಸಾಗರ್, ಬೊಕ್ಕಳ್ಳಿ ನಂಜುಂಡಸ್ವಾಮಿ ನಗರ್ಲೇ ವಿಜಯ್ ಕುಮಾರ್, ದಸಂಸ ತಾಲ್ಲೂಕು ಸಂಚಾಲಕ ಮಂಜುಶಂಕರಪುರ, ಜಿಲ್ಲಾ ಸಂಚಾಲಕ ನಾರಾಯಣ್, ಶಂಕರಪುರ ಇಟ್ಟಿಗೆ ಕೃಷ್ಣ, ಭಾಗವಹಿಸಿದ್ದರು.
ನಂಜನಗೂಡು ಮುಸ್ಲೀಂ ಸಮುಧಾಯದ ವತಿಯಿಂದ ಬೃಹತ್ ಪ್ರತಿಭಟನೆ:

ಜಯಲಲಿತಾ ಪ್ರತಿಕೃತಿ ದಹನನಂಜನಗೂಡು ನಗರದ ಹುಲ್ಲಹಳ್ಳಿ ವೃತ್ತದಲ್ಲಿ ನೂರಾರು ಮುಸ್ಲೀಂ ಭಾಂದವರು ಸೇರಿ ಕಾವೇರಿ ನೀರಿಗಾಗಿ ತಮ್ಮದೇ ಹೋರಾಟದ ಮೂಲಕ ಪ್ರತಿಭಟನೆ ನಡೆಸಿ ಜಯಲಲಿತಾ ಪ್ರತಿಕೃತಿ ದಹಿಸಿ ಧರಣಿ ನಡೆಸಿ, ರಾಜ್ಯ ಬಂದ್ ಬೆಂಬಲಿಸಿದ್ದು ವಿಶೇಷವಾಗಿತ್ತು. ಪ್ರತಿಭಟನೆಯಲ್ಲಿ ಜಾಮೀಯಾ ಹಾಗೂ ಈದ್ಗಾ ಮಸೀದಿ ಅಧ್ಯಕ್ಷರಾದ ಎಂ. ಅಬ್ದುಲ್ ಖಾದರ್, ನಗರಸಭಾ ಸದಸ್ಯ ಮಟನ್ ಬಾಬು, ಸಾಧಿಕ್, ನಾಸಿರ್‍ಖಾನ್, ಬಿಜೆಪಿ ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷ ಇಲಿಯಾಸ್ ಜಿಯಾ ಅಹಮದ್, ಟಿಪ್ಪು ಯುವಕರ ಸೈನ್ಯ ಅಧ್ಯಕ್ಷ ಸಯದ್ ನೂರ್, ಸಯದ್ ನಯಾಜ್, ಯಾಸಿನ್ ಅಹಮದ್, ಪರ್ವೀಜ್ ಅಹಮದ್, ಜಹೀರ್, ನಹೀಮ್, ನೂರಾರು ಮುಸ್ಲೀಂ ಮುಖಂಡರು, ಯುವಕರು, ಭಾಗವಹಸಿದ್ದರು

 

► Follow us on –  Facebook / Twitter  / Google+

Facebook Comments

Sri Raghav

Admin