ಕಾವೇರಿ ನೀರು ಬಿಡದೆ ಬೆಳೆ ನಷ್ಟ : ಪರಿಹಾರ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Suprem-Court

ನವದೆಹಲಿ, ಆ.16- ಕರ್ನಾಟಕ ರಾಜ್ಯವು 2013ರಲ್ಲಿ ಕಾವೇರಿ ನೀರು ಬಿಡದೆ ಬೆಳೆ ನಷ್ಟ ಉಂಟುಮಾಡಿದ್ದಕ್ಕಾಗಿ ಪರಿಹಾರ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಮುಂದೂಡಿದೆ. ನ್ಯಾಯಮೂರ್ತಿ ಗೋಪಾಲಗೌಡರನ್ನು ಒಳಗೊಂಡ ವಿಭಾಗೀಯ ಪೀಠ ಅರ್ಜಿಯ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದರು. ಕರ್ನಾಟಕವು 2013ರಲ್ಲಿ ತಮಿಳುನಾಡಿಗೆ ಕಾವೇರಿ  ನೀರನ್ನು ಹರಿಯಲು ಬಿಟ್ಟಿಲ್ಲ. ಇದರಿಂದ ಕುರುವೆ ಬೆಳೆ ಸೇರಿದಂತೆ ಇತರ ಫಸಲಿಗೆ ಅಪಾರ ನಷ್ಟವಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.  ಇದರಿಂದ 1300 ಕೋಟಿ ರೂ. ಪರಿಹಾರ ದೊರಕಿಸಿಕೊಡಬೇಕೆಂದು ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ಕೈಗೊಂಡ ವಿಭಾಗೀಯ ಪೀಠವು ಉಭಯ ರಾಜ್ಯಗಳ ವಾದ-ಪ್ರತಿವಾದಗಳನ್ನು ಆಲಿಸಿ ಮುಂದಿನ ವಿಚಾರಣೆಯನ್ನು ಒಂದು ವಾರ ಮುಂದೂಡಿದರು. ಮಳೆ ಅಭಾವದ ಹಿನ್ನೆಲೆಯಲ್ಲಿ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಕಾರಣ ಕರ್ನಾಟಕವು ತಮಿಳುನಾಡಿಗೆ ನೀರು ಬಿಡಲು ನಿರಾಕರಿಸಿತ್ತು.

Facebook Comments

Sri Raghav

Admin