ಕಾವೇರಿ ನೀರು ಮಲೀನವಾಗಿದೆ : ಸುಪ್ರೀಂನಲ್ಲಿ ತಮಿಳುನಾಡು ಹೊಸ ಕ್ಯಾತೆ

ಈ ಸುದ್ದಿಯನ್ನು ಶೇರ್ ಮಾಡಿ

Cauvery-Water

ನವದೆಹಲಿ, ಫೆ.20- ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕದಿಂದ ಹರಿದು ಬರುತ್ತಿರುವ ಕಾವೇರಿ ನೀರು ಮಲೀನವಾಗಿದೆ ಎಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ತಕರಾರು ಎತ್ತಿದೆ. ಈ ಕುರಿತು ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ದೀಪಕ್‍ಮಿಶ್ರ ನೇತೃತ್ವದ ಪೀಠವು ನೀರು ಮಾಲಿನ್ಯ ಕುರಿತು ತಜ್ಞರಿಂದ ವರದಿ ಪಡೆಯಬೇಕಾಗುತ್ತದೆ. ಮಾಲಿನ್ಯ ಪ್ರಮಾಣವನ್ನು ತಜ್ಞರೇ ನಿರ್ಧರಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.  ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಎರಡು ವಾರಗಳ ಕಾಲ ಸುಪ್ರೀಂಕೋರ್ಟ್ ಮುಂದೂಡಿದೆ.

ಈಗಾಗಲೇ ಮೇಕೆದಾಟು ಜಲಾಶಯ ಯೋಜನೆಗೆ ತಗಾದೆ ತೆಗೆದು ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಅರ್ಜಿ ಸಲ್ಲಿಸಿರುವ ತಮಿಳುನಾಡು ಈಗ ಕಾವೇರಿ ವಿಷಯದಲ್ಲಿ ಹೊಸದಾಗಿ ತಕರಾರು ಸೃಷ್ಟಿಸಿದೆ. ತಮಿಳುನಾಡು ನಿಲುವಿನ ಬಗ್ಗೆ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಹೆಜ್ಜೆ ಹಿಡಲು ನಿರ್ಧರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin