ಕಾವೇರಿ ಬಿಕ್ಕಟ್ಟಿಗೆ ಒಗ್ಗಟ್ಟು ಮೋದಿ – ಜಯಲಲಿತಾ ಭಾವಚಿತ್ರಕ್ಕೆ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

BELAGAM-2

ಹುಬ್ಬಳ್ಳಿ,ಸೆ.7- ಕಾವೇರಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಪುನರ್‍ಪರಿಶೀಲನಾ ಅರ್ಜಿ ಸಲ್ಲಿಸಲು ಒತ್ತಾಯಿಸಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿ ಪ್ರದಾನಿ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಮೇಲಿಂದ ಮೇಲೆ ವಿವಿಧ ರಾಜ್ಯಗಳ ಮಧ್ಯೆ ಜಲ ವಿವಾದಗಳು ಮರುಕಳಿಸುತ್ತಿರುವುದರಿಂದ ರಾಜ್ಯ ರಾಜ್ಯಗಳ ಜನತೆಯ ದ್ವೇಷಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರ ಒಂದು ವೈಜ್ಞಾನಿಕ ರಾಷ್ಟ್ರೀಯ ಜಲ ನೀತಿ ರೂಪಿಸಲು ಯೋಚಿಸಬೇಕು ಎಂದು ಒತ್ತಾಯಿಸಿದರು.

ಪದೇ ಪದೇ ರಾಜ್ಯದ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಹಿನ್ನೆಡೆಯಾಗುತ್ತಿದ್ದು, ರಾಜ್ಯದ ಪರ ವಕೀಲತರ ಅಸಮರ್ಥತೆಯೂ ಕಾರಣವಾಗಿದ್ದು, ರಾಜ್ಯದ ಪರ ವಕೀಲರ ತಂಡವನ್ನು ಇನ್ನಷ್ಟೂ ಬಲಷ್ಟಗೊಳಿಸುವಂತೆ ಅಥವಾ ಆ ತಂಡವನ್ನು ಬದಲಾಯಿಸುವುದು ತುರ್ತು ಅಗತ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.ಈ ಪ್ರತಿಭಟನೆಯಲ್ಲಿ ಅಮೃತ ಇಜಾರಿ, ಸುಭಾಸ ನಡುವಿನಮನಿ, ಸಚೀನ, ಸಂಜು ದುಮಕ್ಕನಾಳ, ಸುನೀತಾ ಹೊಸಪೇಟ್, ಲಲಿತಾ ಲೋನಿ, ಕುಲಸುಮಾ ಯಲಿಗಾರ ಸೇರಿದಂತೆ ಮುಂತಾದವರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin