ಕಾವೇರಿ ಬ್ಯಾಂಕರ್ಸ್‍ನ ಗೋಡೆ ಕೊರೆದು ಚಿನ್ನಾಭರಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

t-narasipura

ತಿ.ನರಸೀಪುರ ಆ.8- ಪಟ್ಟಣದ ಲಿಂಕರಸ್ತೆಯಲ್ಲಿರುವ ಲೆನಿನ್ ಚೌದರಿ ಎಂಬುವರಿಗೆ ಸೇರಿದ ಕಾವೇರಿ ಬ್ಯಾಂಕರ್ಸ್ ಗೋಡೆ ಕರೆದು ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಶನಿವಾರ ಮಧ್ಯರಾತ್ರಿ ಬ್ಯಾಂಕರ್ಸ್ ಹಿಂಭಾಗದ ಗೋಡೆ ಯನ್ನು ಕೊರೆದು ಒಳ ನುಸುಳಿ ರುವ ಕಳ್ಳರು ಜ್ಯೂಯಲರ್ಸ್‍ನಲ್ಲಿ ಇಡಲಾಗಿದ್ದ ಕಬ್ಬಿಣ ತಿಜೋರಿ ಯನ್ನು ಗ್ಯಾಸ್ ವೆಲ್ಡಿಂಗ್ ಕಟರ್ ನಿಂದ ಕತ್ತರಿಸಿದ್ದು, ತಿಜೋರಿ ಒಳಗಿನ ಬಾಕ್ಸ್ ತೆರಯಲಾಗದೆ ವಿಫಲರಾಗಿ, ವೆಲ್ಡಿಂಗ್ ಸಾಮಾಗ್ರಿಗಳನ್ನು ಅಲ್ಲೆ ಬಿಟ್ಟು, ಅಂಗಡಿ ಒಳಭಾಗದಲ್ಲಿ ಇಡಲಾಗಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ದೋಚಿಕೊಂಡು ತೆರಳಿದ್ದಾರೆಂದು ತಿಳಿದು ಬಂದಿದೆ.
ಎಷ್ಟು ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥ ಕಳುವಾಗಿದೆ ಎಂದು ನಿಖರ ಮಾಹಿತಿ ಲಭ್ಯವಿಲ್ಲ. ಬೆಳಿಗ್ಗೆ ಎಂದಿನಂತೆ ಅಂಗಡಿ ಮಾಲೀಕರು ಬಾಗಿಲನ್ನು ತೆರೆದು ನೋಡಲಾಗಿ ಕಳ್ಳತನ ನಡೆ ದಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಡಿಷನಲ್ ಎಸ್ಪಿ ಕಲಾ ಕೃಷ್ಣಸ್ವಾಮಿ, ವೃತ್ತ ನೀರಿಕ್ಷಕ ಮನೋಜ್‍ಕುಮಾರ್, ಸಬ್‍ಇನ್ಸ್‍ಪೆಕ್ಟರ್ ರವಿಶಂಕರ್, ಹಾಗೂ ಕ್ರೈಂ ಸಬ್‍ಇನ್ಸ್‍ಪೆಕ್ಟರ್ ಸುರೇಶ್, ಎಎಸ್‍ಐ ದೊಡ್ಡೇಗೌಡ ಸ್ಥಳ ಪರಿಶೀಲನೆ ನಡೆಸಿ ಕಳ್ಳರು ಬಿಟ್ಟು ಹೋಗಿದ್ದ ವೆಲ್ಡಿಂಗ್ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿರುತ್ತಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin

Leave a Reply

Your email address will not be published.

sixteen + seven =