ಕಾವೇರಿ ವಿವಾದ : ಕೇಂದ್ರ ಸಚಿವ ಗಡ್ಕರಿ ಭೇಟಿ ಮಾಡಿದ ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ನವದೆಹಲಿ. ಮಾ. 08 : ಇತ್ತೀಚಿಗೆ ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ವಿಚಾರವಾಗಿ ಚರ್ಚಿಸಲು ದೆಹಲಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಇಂದು ಶ್ರಮ ಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಯವರನ್ನು ಭೇಟಿ ಮಾಡಿದರು.  ಭೇಟಿಯ ವೇಳೆ ಸುಪ್ರಿಂ ಕೋರ್ಟಿನ ವಿಷಯಗಳ ಕುರಿತಾಗಿ ಚರ್ಚಿಸಿದ ದೇವೇಗೌಡರು, ಕಾವೇರಿ ನಿರ್ವಹಣಾ ಮಂಡಳಿಯ ವಿಚಾರಾಗಿ ಎರಡು ರಾಜ್ಯಗಳಿಗೆ ನ್ಯಾಯ ಒದಗಿಸುವಂತೆ ಸಚಿವರ ಬಳಿ ಮನವಿ ಮಾಡಿಕೊಂಡರು. ಅಲ್ಲದೆ ಇತ್ತೀಚಿಗೆ ಮಂಡಳಿಯ ರಚನೆಯನ್ನು ತುರ್ತಾಗಿ ಮಾಡಲು ನಿರಾಕರಿಸಿದ್ದ ಸಚಿವರಿಗೆ, ಮಂಡಳಿ ರಚನೆಯ ವೇಳೆ ಈ ಭಾಗದ ಕುಡಿಯುವ ನೀರಿನ ಅಗತ್ಯತೆಯನ್ನು ಪರಿಗಣಿಸುವುದಲ್ಲದೆ ಅದಕ್ಕಿರುವ ನ್ಯೂನ್ಯತೆಗಳನ್ನು ಸರಿಪಡಿಸಿ ಸುಪ್ರಿಂಕೋರ್ಟ್ ತೀರ್ಪಿನ ಅನುಸಾರವಾಗಿ ಮಂಡಳಿ ರಚಿಸಬೇಕೆಂದು ಸಚಿವ ನಿತಿನ್ ಗಡ್ಕರಿಯವರಿಗೆ ಮನವಿಮಾಡಿಕೊಂಡರು.

ಬಳಿಕ ಮಾತನಾಡಿದ ಹೆಚ್.ಡಿ ದೇವೇಗೌಡರು, ಕಾವೇರಿ ವಿವಾದ ಬಗ್ಗೆ ಸುಪ್ರೀಂ ಕೊರ್ಟ್ ತೀರ್ಪು ನೀಡಿತ್ತು. ಸಂತೋಷ ಪಡುವಂತ ಅಂಶ ಸುಪ್ರಿಂಕೊರ್ಟ್ ತೀರ್ಪು ನಲ್ಲಿಲ್ಲ. ಹೀಗಾಗಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಗಡ್ಕರಿ ಗಮನಕ್ಕೆ ತಂದಿದ್ದೇನೆ. ನಾನು ತೀರ್ಪಿನ ಕೆಲ ವಿಷಯಗಳನ್ನು ಅಧ್ಯಯನ ಮಾಡಿದ್ದೇನೆ. ಅದರ ಆಧಾರದ ಮೇಲೆ ಗಡ್ಕರಿ ಮರು ಪರಿಶೀಲನೆ ಅರ್ಜಿ ಹಾಕುವ ಕುರಿತು ಚರ್ಚಿಸಿದ್ದೇನೆ. ಈ ವೇಳೆ ಗಡ್ಕರಿ ಕರ್ನಾಟಕ ಏಕೆ ಅರ್ಜಿ ಹಾಕಿಲ್ಲ ಎಂದು ಕೇಳಿದರು ಎಂದರು.

ನಾನು ಮಂಡಳಿ ರಚನೆಗೆ ಕಾಲವಕಾಶ ಕೇಳುವಂತೆ ಮನವಿ ಮಾಡಿದ್ದೇನೆ. ಮಂಡಳಿ ರಚನೆ ಸಮಸ್ಯೆ ಬಗ್ಗೆ ಪರಿಗಣನೆ ಮಾಡಬೇಕು ಎಂದಿದ್ದೇನೆ. ಎರಡು ರಾಜ್ಯಕ್ಕೂ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೇನೆ. ಸಂಸತ್ ಆವರಣದಲ್ಲಿ ತಮಿಳುನಾಡು ಸಂಸದರು ಮಂಡಳಿ ರಚನೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ನಮ್ಮಗೆ ಕುಡಿಯುವ ನೀರು ಎಷ್ಟು ಬೇಕು ಯೋಚಿಸಬೇಕು. ಕಾವೇರಿ ಕಣಿವೆಯ ಏತ ನೀರಾವರಿ ಯೋಜನೆಗಳನ್ನು ರದ್ದು ಮಾಡಿದ್ದಾರೆ. ನ್ಯೂನತೆಗಳು ಸರಿಪಡಿಸಿ ಬೊರ್ಡ್ ರಚನೆ ಮಾಡಬೇಕು ಎಂದು ತಿಳಿಸಿರುವುದಾಗಿ ಹೇಳಿದರು.

ಸುಪ್ರಿಂಕೊರ್ಟ್ ಹದಿನೈದು ವರ್ಷ ವಾಪಸ್ ಬರದಂತೆ ಹೇಳಿದೆ. ಮಂಡಳಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರವೇ ಮರುಪರಿಶೀಲನೆ ಅರ್ಜಿ ಸಲ್ಲಿಸಲು ಸಲಹೆ ನೀಡಿದ್ದೇನೆ. 14 TMC ನೀರಿಗೆ ರಾಜ್ಯದ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುಪ್ರಿಂಕೊರ್ಟ್ ತೀರ್ಪು ಆಳವಾಗಿ ಅಧ್ಯಯನ ಮಾಡಿ ನೋಡಬೇಕು ಎಂದು ಹೆಚ್ ಡಿಡಿ ತಿಳಿಸಿದರು.

Facebook Comments

Sri Raghav

Admin