ಕಾವೇರಿ ವಿವಾದ ದೊಡ್ಡ ಸಮಸ್ಯೆ ಅಲ್ಲ : ಕಮಲ ಹಾಸನ್

ಈ ಸುದ್ದಿಯನ್ನು ಶೇರ್ ಮಾಡಿ

Kamal-Hassan--011
ಚೆನ್ನೈ, ಮೇ 10- ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ದೊಡ್ಡ ಸಮಸ್ಯೆಯಲ್ಲ, ರಾಜಕೀಯ ಹಸ್ತಕ್ಷೇಪದಿಂದಾಗಿ ಅಡ್ಡಿಯಾಗುತ್ತಿದೆ ಎಂದು ನಟ ಹಾಗೂ ಮಕ್ಕಳ ನೀದಿ ಮೈಯಮï ಪಕ್ಷದ ಸ್ಥಾಪಕ ಕಮಲ ಹಾಸನ್ ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ಎಫ್‍ಕೆಸಿಸಿಐಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ವಿಶೇಷ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಕಾವೇರಿ ವಿವಾದ ಬಗೆಹರಿಸಲಾಗದಷ್ಟು ದೊಡ್ಡ ಸಮಸ್ಯೆಯಲ್ಲ. ರಾಜಕೀಯವನ್ನು ಬದಿಗಿಟ್ಟು ವಿವೇಚನಯುತವಾಗಿ ಆಲೋಚಿಸಿದರೆ ತಕ್ಷಣವೇ ಅದಕ್ಕೆ ಪರಿಹಾರ ಹುಡುಕಲು ಸಾಧ್ಯ ಎಂದು ತಿಳಿಸಿದ್ದಾರೆ.

ಕಾವೇರಿ ನೀರು ಬಳಕೆಯಾಗುವ ಫಲಾನುಭವಿಗಳಾದ ರೈತರ ಕೈಗೆ ನೀಡಿದರೆ ಇದಕ್ಕೊಂದು ಪರಿಹಾರ ಹುಡುಕಬಹುದು. ಇದಕ್ಕೆ ಸಂಬಂಧಪಡದ ವ್ಯಕ್ತಿಗಳು ಬರುತ್ತಾರೆ. ಕಾವೇರಿ ನೀರಿನ ಬಳಕೆದಾರರ ಕೈಗೆ ಈ ವಿಚಾರವನ್ನು ನೀಡಿದರೆ ಇದಕ್ಕೆ ಪರಿಹಾರ ಹುಡುಕಬಹುದು ಎಂದು ಹೇಳಿದ್ದಾರೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ಬೆರೆತಿದೆ. ಹಲವು ವಿಷಯಗಳು ಇದನ್ನು ಹಾಳು ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನೀರಿನ ಸಂರಕ್ಷಣೆಯನ್ನು ನಾವು ಮಾಡಬಹುದು ಎಂದಿದ್ದಾರೆ.

Facebook Comments

Sri Raghav

Admin