ಕಾವೇರಿ ವಿವಾದದಲ್ಲಿ ರಾಜಕೀಯ ಸಲ್ಲದು : ಗೌಡರಿಗೆ ಕಾಗೋಡು ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ


S-Kagodu-Timmappa

ಕೋಲಾರ, ಆ.25- ಸಂಕಷ್ಟ ಪರಿಸ್ಥಿತಿ ಇದ್ದರೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿ ರುವುದು ಸರಿಯಲ್ಲ. ಕಾವೇರಿ ಟ್ರಿಬ್ಯುನಲ್ ಇರುವುದರಿಂದ ನೀರನ್ನು ಬಿಡಲೇಬೇಕಾಗುತ್ತದೆ. ಈ ಕುರಿತಂತೆ ಒಗ್ಗಟ್ಟಾಗಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ತಿಳಿಸಿದರು.  ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಧರಣಿ ಮಾಡಲು ಉದ್ದೇಶಿಸಿರುವುದು ಸರಿಯಲ್ಲ. ಮಾಜಿ ಪ್ರಧಾನಿ ದೇವೇಗೌಡರಿಗೂ ಟ್ರಿಬ್ಯುನಲ್ ವಿಚಾರ ತಿಳಿದಿದೆ. ನೀರನ್ನು ಬಿಡಲೇಬೇಕಾಗುತ್ತದೆ. ನಮಗೇ ನೀರಿಲ್ಲ ಎಂದು ನೀರು ಬಿಡದೆ ಇರಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಗೊತ್ತಿದೆ ಎಂದರು.

ಈ ವಿಚಾರದಲ್ಲಿ ಎಲ್ಲರೂ ಸೇರಿ ಪಕ್ಷಭೇದ ಮರೆತು ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅದನ್ನು ಬಿಟ್ಟು ಧರಣಿ ಮಾಡಿದರೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದರು. ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಭೂ ಹಗರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.  ಪ್ರಸ್ತುತ ನಿಮ್ಮ ಊರಿನಲ್ಲಿರುವ ಸಮಸ್ಯೆಗಳ ಬಗ್ಗೆ ನೀವು ಚರ್ಚಿಸಿ ಎಂದು ನುಡಿದರು. ಎಸ್ಪಿ ದಿವ್ಯಾ ಗೋಪಿನಾಥ್, ಕೆಯುಡಿಎ ಅಧ್ಯಕ್ಷ ಚನ್ನಘಟ್ಟ ವೆಂಕಟಮುನಿಯಪ್ಪ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜಿಲ್ಲಾಧಿಕಾರಿ ತ್ರಿಲೋಕ್ಚಂದ್ರ ಮತ್ತಿತರರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin