ಕಾವೇರಿ ಸಂಕಷ್ಟ ವಿವರಿಸಿದ ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

m-b--patil

ಬೆಂಗಳೂರು, ಸೆ.23- ಕಾವೇರಿ ನದಿ ಜಲವಿವಾದ ಇದುವರೆಗೆ ನಡೆದು ಬಂದ ಹಾದಿ ಸಂಕ್ಷೀಪ್ತ ವಿವರವನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಗೆ ನೀಡಿದರು.ಕಾವೇರಿ ಜಲಾನಯನ ಭಾಗದ ನೀರಿನ ಸಂಕಷ್ಟಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈಎಸ್‍ವಿ ದತ್ತಾ ಅವರು, ನಿರ್ಣಯ ಮಂಡಿಸಿದ ನಂತರ ಮಾತನಾಡಿದ ಸಚಿವರು, ಕಾವೇರಿ ವಿವಾದವು ಕಳೆದ 1892ರಿಂದಲೇ ಪ್ರಾರಂಭವಾಗಿದೆ. ಅಂದಿನ ಮದ್ರಾಸ್ ಹಾಗೂ ಮೈಸೂರು ಸರ್ಕಾರದ ನಡುವೆ ನೀರು ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ ಕಾವೇರಿ ನ್ಯಾಯಾಧೀಕರಣ ರಚನೆಯಾಯಿತು. ನ್ಯಾಯಾಧೀಕರಣವು ಮಧ್ಯಂತರ ತೀರ್ಪು ನೀಡಿ ತಮಿಳು ನಾಡಿಗೆ ವಾರ್ಷಿಕ 205 ಟಿಎಂಸಿ ಅಡಿ ಬಿಡಬೇಕು ಎಂದು ನಿರ್ದೇಶಿಸಿತ್ತು.

ಅಂತಿಮ ಆದೇಶದಲ್ಲಿ ಸಾಮಾನ್ಯ ವರ್ಷದಲ್ಲಿ ವಾರ್ಷಿಕ ತಮಿಳು ನಾಡಿಗೆ 192 ಟಿಎಂಸಿ ಅಡಿ ಬಿಡುವಂತೆ ತೀರ್ಪು ನೀಡಿದೆ. ಕಾವೇರಿ ನಡಿ ಪಾತ್ರದಲ್ಲಿ 740 ಟಿಎಂಸಿ ಅಡಿ ನೀರು ಲಭ್ಯವಿದ್ದು, ಕರ್ನಾಟಕಕ್ಕೆ 270 ಟಿಎಂಸಿ ಅಡಿ, ತಮಿಳು ನಾಡಿಗೆ 419 ಟಿಎಂಸಿ ಅಡಿ, ಕೇರಳಕ್ಕೆ 30 ಟಿಎಂಸಿ ಅಡಿ, ಪಾಂಡಿಚೆರಿಗೆ 7 ಟಿಎಂಸಿ ಅಡಿ, ಪರಿಸರ ರಕ್ಷಣೆಗೆ 10 ಟಿಎಂಸಿ ಅಡಿ ಹಾಗೂ ಸಮುದ್ರಕ್ಕೆ ಹರಿದು ಹೋಗುವ 4 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ಇದಾದ ನಂತರ ಕೇಂದ್ರ ಸರ್ಕಾರ ಕಾವೇರಿ ನದಿ ಪ್ರಾಧಿಕಾರ, ಕಾವೇರಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಿದೆ ಎಂದು ಹೇಳಿದರು. ಈಗ ತಮಿಳು ನಾಡು ಸುಪ್ರೀಂ ಕೋರ್ಟ್ ಮೊರೆ ಹೋದ ಪರಿಣಾಮ ಸಂಕಷ್ಟದಲ್ಲೂ ನೀರು ಹರಿಸುವಂತೆ ಆದೇಶ ನೀಡಿದೆ ಎಂದು ಅಂಕಿ-ಅಂಶಗಳ ಸಹಿತಿ ಸದನಕ್ಕೆ ಮಾಹಿತಿ ನೀಡಿದರು.

 

► Follow us on –  Facebook / Twitter  / Google+

Facebook Comments

Sri Raghav

Admin