ಕಾವೇರಿ ಸಮಸ್ಯೆಗೆ ವಿನಾಯಕನ ಮೊರೆ ಹೋಗಿ

ಈ ಸುದ್ದಿಯನ್ನು ಶೇರ್ ಮಾಡಿ

Kaveri-0002

ಕೊಳ್ಳೇಗಾಲ. ಸೆ.17- ಕಾವೇರಿ ವಿವಾದ ಬಗೆಹರಿಸಿ ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿರುವ ಜನರು ಶಾಂತಿ ಸೌರ್ಹಾದತೆಯಿಂದ ಜೀವನ ಸಾಗಿಸಲು ವಿನಾಯಕನ ಬಳಿ ಮೊರೆ ಹೋಗಬೇಕಾಗಿದೆ ಎಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್ ಮಹೇಶ್ ತಿಳಿಸಿದರು.  ಪಟ್ಟಣದ ಬಸ್‍ನಿಲಾದಣದ ಪಕ್ಕದಲ್ಲಿ ಕಾರು ಚಾಲಕರು ಹಾಗೂ ಮಾಲೀಕರ ಸಂಘದ ಆಯೋಜಿಸಿರುವ 10ನೇ ವರ್ಷದ ಗಣಪತಿ ಮಹೋತ್ಸವದಲ್ಲಿ ಮಾತನಾಡಿ, ಸರಿಯಾಗಿ ಮಳೆಯಾಗದ ಕಾರಣ ಮಂಡ್ಯ, ಮೈಸೂರು, ಹಾಸನ, ಚಾ.ನಗರ ಭಾಗದ ರೈತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಇದೇ ತಿಂಗಳು 20ರಂದು ನಡೆಯಲ್ಲಿರುವ ಕಾವೇರಿ ನೀರಿನ ಮೇಲುಸ್ತುವಾರಿ ಸಭೆಯಲ್ಲಿ ವಿಘ್ನ ನಿವಾರಕ ವಿನಾಯಕ ನಮ್ಮ ರಾಜ್ಯದ ಪರ ವರಕೊಡಲಿ ಎಂದು ಮೋರೆ ಹೋಗಬೇಕಾಗಿದೆ ಎಂದರು.
ಏಕೆಂದರೆ ಸುಪ್ರೀಂಕೋರ್ಟ್ ನಮ್ಮ ಪರವಾಗಿಲ್ಲ, ರಾಜ್ಯ ಸರ್ಕಾರ ನಮ್ಮ ಪರವಾಗಿ ನಿಂತು ಹೋರಾಟ ಮಾಡುವ ಧೈರ್ಯ ಕಳೆದುಕೊಂಡಿದೆ, ಕೇಂದ್ರ ಸರ್ಕಾರ ಎರಡೂ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ವಿನಾಯಕನ ಮೊರೆ ಹೋಗುವುದೊಂದೇ ದಾರಿ ಎಂದರು.ನಗರಸಭೆ ಸದಸ್ಯರಾದ ಕೃಷ್ಣಯ್ಯ, ರಾಮಕೃಷ್ಣ, ರಂಗಸ್ವಾಮಿ, ಗ್ರಾ.ಪಂ ಸದಸ್ಯ ಸೋಮಣ್ಣ ಉಪ್ಪಾರ್, ಮುಖಂಡ ಕಿನಕಹಳ್ಳಿ ರಾಚ್ಚಯ್ಯ, ಜಗದೀಶ್, ಯುವ ಕಾಂಗ್ರೇಸ್ ಅಧ್ಯಕ್ಷ ಚೇತನ್, ಪತ್ರಕರ್ತರಾದ ಟಿ.ಜಾನ್‍ಪೀಟರ್, ಚಿಕ್ಕಮಾಳಿಗೆ, ಅನ್ವರ್‍ಪಾಷ, ಸಿಡಿ ಬಾಬು ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin