ಕಾವೇರಿ ಸಮಸ್ಯೆ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಲಿ : ಚಲುವರಾಯಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Chaluvaಬೆಂಗಳೂರು, ಸೆ.29– ಕಾವೇರಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ಮಾಡಿರುವ ಕ್ರಮ ಸ್ವಾಗತಾರ್ಹವಾಗಿದೆ. ಕೇಂದ್ರ ಜಲಸಂಪನ್ಮೂಲ ಸಚಿವರಾದ ಉಮಾಭಾರತಿಯವರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜಲ ಪರಿಸ್ಥಿತಿಯ ಸಂಪೂರ್ಣ ವಿವರ ಪಡೆದು ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸುವ ಪ್ರಯತ್ನ ಮಾಡಬೇಕೆಂದು ಮಾಜಿ ಸಚಿವ, ಶಾಸಕ ಚಲುವರಾಯಸ್ವಾಮಿ ಒತ್ತಾಯಿಸಿದ್ದಾರೆ. ಸಮಸ್ಯೆಯನ್ನು ನ್ಯಾಯಾಲಯದಿಂದ ಹೊರಗಡೆ ಇತ್ಯರ್ಥಪಡಿಸಲು ಪ್ರಯತ್ನಿಸಿದರೆ ದಶಕಗಳಿಂದ ಬಗೆಹರಿಯದಿರುವ ಈ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ.  [ ಇದನ್ನೂ ಓದಿ :   ಕಾವೇರಿ ಸಂಧಾನ ಸಭೆ ವಿಫಲ : ಸಚಿವೆ ಉಮಾಭಾರತಿ ವ್ಯರ್ಥ ಪ್ರಯತ್ನ    ]

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಇಂದು ಉಮಾಭಾರತಿಯವರು ಮಾಡಿರುವ ಈ ಪ್ರಯತ್ನ ಮುಂದುವರಿಸಿ ಎರಡೂ ರಾಜ್ಯಗಳಿಗೆ ನ್ಯಾಯ ದೊರಕುವಂತೆ ಮಾಡಬೇಕು. ಅದರಲ್ಲೂ ವಿಶೇಷವಾಗಿ, ನಿರಂತರವಾಗಿ ಕಾವೇರಿ ವಿಷಯದಲ್ಲಿ ಅನ್ಯಾಯಕ್ಕೊಳಗಾಗಿರುವ ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಗುವಂತೆ ಮಾಡಬೇಕಾಗಿದೆ ಎಂದು ಕಾವೇರಿ ಜಲಾನಯನ ಪ್ರದೇಶದ ಶಾಸಕನಾಗಿ ನನ್ನ ಆಗ್ರಹವಾಗಿದೆ ಎಂದು ಅವರು ಹೇಳಿದರು. ನೆಲ, ಜಲದ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದಂತೆ ಸಮಸ್ಯೆ ಇತ್ಯರ್ಥ ಮಾಡಬೇಕು. ಎರಡೂ ರಾಜ್ಯಗಳು ಜಲದ ವಿಷಯದಲ್ಲಿ ಜಗಳವಾಡಬಾರದು. ಜಗಳವಾಡಿದರೆ ನಾನೇ ಉಪವಾಸ ಕೂರುತ್ತೇನೆ. ಏನೇ ಸಮಸ್ಯೆ ಇದ್ದರೂ ನನ್ನನ್ನು ಸಂಪರ್ಕಿಸಿ ಎಂದು ಹೇಳುವ ಮೂಲಕ ಉಮಾಭಾರತಿಯವರು ಸೌಹಾರ್ದಯುತವಾಗಿ ಸಂಧಾನದ ಕೆಲಸ ಮಾಡಿದ್ದಾರೆ. ಈ ಮೂಲಕ ಎರಡೂ ರಾಜ್ಯಗಳ ನಡುವಿನ ಸಮಸ್ಯೆಯನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕಾವೇರಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆಗೆದುಕೊಂಡಿರುವ ದಿಟ್ಟ ಕ್ರಮ ಶ್ಲಾಘನೀಯವಾದುದು. ಎಲ್ಲ ಹಿರಿಯ ಮುಖಂಡರ ಸಭೆ ಕರೆದು ಸರ್ವಪಕ್ಷಗಳೊಂದಿಗೆ ಚರ್ಚಿಸಿ ಮಂತ್ರಿ ಪರಿಷತ್‍ನೊಂದಿಗೆ ಸಮಾಲೋಚಿಸಿ ಸಂಪುಟ ಸಭೆ ನಡೆಸಿ ತುರ್ತು ಅಧಿವೇಶನ ನಡೆಸಿ ಸೂಕ್ತ ನಿರ್ಣಯ ಕೈಗೊಂಡು ದಿಟ್ಟ ಹೆಜ್ಜೆ ಇಟ್ಟು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಮುಂದಾಗಿದ್ದುಅವರ ಕಾರ್ಯಕ್ಷಮತೆಗಿಡಿದ ಕೈಗನ್ನಡಿಯಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು. ಕಾವೇರಿ, ಮಹದಾಯಿ ವಿಷಯದಲ್ಲಿ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin