ಕಾವೇರಿ ಹೋರಾಟದ ವೇಳೆ ಚೆನ್ನೈನಲ್ಲಿ ಐಪಿಎಲ್ ಬೇಕಾ..? : ರಜನಿ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Rajn-i--01

ಚೆನ್ನೈ, ಏ.8-ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವಾಗ ಚೆನ್ನೈನಲ್ಲಿ ಐಪಿಎಲ್ ಕ್ರಿಕೆಟ್ ನಡೆಯುವುದು ಇರಿಸುಮುರಿಸಿನ ಸಂಗತಿ ಎಂದು ಖ್ಯಾತ ಚಿತ್ರನಟ ಮತ್ತು ರಾಜಕಾರಣಿ ರಜನಿಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆನ್ನೈನಲ್ಲಿ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾವೇರಿ ಹೋರಾಟದ ವೇಳೆ ಚೆನ್ನೈನಲ್ಲಿ ಐಪಿಎಲ್ ಟಿ-20 ಕ್ರಿಕೆಟ್ ನಡೆಸುವ ಅಗತ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಕಾವೇರಿ ನ್ಯಾಯ ಮಂಡಳಿ ರಚನೆಗೆ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಚೆನ್ನೈನ ವಳ್ಳವರ್ ಕೊಟ್ಟಂನಲ್ಲಿ ತಮಿಳು ಚಿತ್ರರಂಗ ಧರಣಿ ನಡೆಸುತ್ತಿದೆ. ರಜನಿಕಾಂತ್, ಕಮಲ್‍ಹಾಸನ್, ಧನುಷ್, ವಿಜಯ್, ಸೂರ್ಯ, ಸತ್ಯರಾಜ್, ಶಿವಕುಮಾರ್, ನಾಸಿರ್, ವಿಶಾಲ್, ಕಾರ್ತಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin