ಕಾಶ್ಮೀರಕ್ಕೆ ನಾಳೆ ಸರ್ವ ಪಕ್ಷ ನಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Rajnath-singh

ನವದೆಹಲಿ, ಸೆ.3- ಪ್ರಕ್ಷುಬ್ಧ ಮಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕಣಿವೆ ರಾಜ್ಯಕ್ಕೆ ಭೇಟಿ ನೀಡುವ ಸರ್ವಪಕ್ಷ ನಿಯೋಗಕ್ಕೆ ಇಂದು ಕೇಂದ್ರ ಸರ್ಕಾರದಿಂದ ಅಗತ್ಯವಾದ ಮಾಹಿತಿ ಒದಗಿಸಲಾಗಿದ್ದು, ಅಲ್ಲಿ ಚರ್ಚಿಸಬೇಕದ್ದ ಸೂಕ್ಷ್ಮ ವಿಚಾರಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ.  ದೆಹಲಿಯಲ್ಲಿ ಇಂದು ಗೃಹ ಸಚಿವ ರಾಜನಾಥ್‌ಸಿಂಗ್, ಸಂಸ ದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್, ಪ್ರಧಾನ ಮಂತ್ರಿಯ ಕಾರ್ಯಾಲಯದ ರಾಜ್ಯ ಸಚಿವ ಜೀತೇಂದ್ರ ಸಿಂಗ್ ಅವರು ಸರ್ವಪಕ್ಷದ ನಿಯೋಗದೊಂದಿಗೆ ಇಂದು ಪೂರ್ವಭಾವಿ ಸಮಾಲೋಚನೆ ನಡೆಸಿದೆ.

ಈ ನಿಯೋಗವು ನಾಳೆಯಿಂದ ಎರಡು ದಿನಗಳ ಕಾಲ ಕಾಶ್ಮೀರಕ್ಕೆ ತೆರಳಿ ಸಮಾಜದ ವಿವಿಧ ಸ್ತರಗಳ ಜನರು ಸೇರಿದಂತೆ ಪ್ರತ್ಯೇಕತಾ ವಾದಿಗಳ ಜೊತೆ ಚರ್ಚೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಮತ್ತು ಚರ್ಚಿಸಬೇಕಾದ ಸೂಕ್ಷ್ಮ ವಿಷಯಗಳ ಬಗ್ಗೆ ನಿಯೋಗಕ್ಕೆ ಕೇಂದ್ರ ಮನವರಿಕೆ ಮಾಡಿಕೊಟ್ಟಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin