ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಾಗೂ ಸವಲತ್ತು ಕುರಿತಂತೆ ಪ್ರಧಾನಿ ಜೊತೆ ಮೆಹಬೂಬ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Mehbooba-Mufti

ಶ್ರೀನಗರ, ಆ.10-ಸಂವಿಧಾನದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ, ಹಕ್ಕು ಹಾಗೂ ಸವಲತ್ತು ಕುರಿತಂತೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು ಭೇಟಿ ಮಾಡಿದರು.  ಸಂವಿಧಾನದ ಅನುಚ್ಛೇಧ 35ಎ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಹಕ್ಕು, ಸವಲತ್ತು , ಅಧಿಕಾರ ಹಾಗೂ ಶಾಶ್ವತ ನಿವಾಸ ಒದಗಿಸುವ ಕುರಿತಂತೆ ಒಮ್ಮತದ ಅಭಿಪ್ರಾಯ ಸಂಗ್ರಹಿಸಲು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಇಂದು ನವದೆಹಲಿಗೆ ಆಗಮಿಸಿ ಚರ್ಚಿಸಿದರು.

ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಜೆಡಿಯು ಪಕ್ಷದ ಶರದ್ ಯಾದವ್ ಸೇರಿದಂತೆ ಇತರೆ ನಾಯಕರನ್ನು ಇಂದು ಭೇಟಿ ಮಾಡಿ ಅನುಚ್ಛೇಧ 35ಎ ಕುರಿತಂತೆ ಕಾನೂನು ಸವಾಲುಗಳ ಕುರಿತು ಸಮಾಲೋಚಿಸಿದರು.  ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಡಿ ವಿಶೇಷ ಅಧಿಕಾರ, ಹಕ್ಕು, ಸವಲತ್ತು ಒದಗಿಸುವ ಸಲುವಾಗಿ ರಾಜ್ಯದ ಪ್ರತಿಪಕ್ಷದ ನಾಯಕರು, ಪ್ರಧಾನಿ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಚರ್ಚಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಹಾಗಾಗಿ ಇಂದು ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದರು.

Facebook Comments

Sri Raghav

Admin