ಕಾಶ್ಮೀರದಲ್ಲಿ ಘರ್ಷಣೆ : ಇಬ್ಬರು ಪ್ರತಿಭಟನಾಕಾರರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kashmir

ಶ್ರೀನಗರ, ಆ.16- ಪ್ರಧಾನಿ ನರೇಂದ್ರಮೋದಿ ಅವರ ಖಡಕ್ ಎಚ್ಚರಿಕೆ, ಬೆನ್ನಲ್ಲೆ ಮಾತುಕತೆಗೆ ಪಾಕ್ ಆಹ್ವಾನಗಳ ಹಿಂದೆಯೇ ಕಣಿವೆ ರಾಜ್ಯದಲ್ಲಿ ಇಂದು ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಭದ್ರತಾ ಪಡೆ ಗುಂಡಿಗೆ ಇಬ್ಬರು ಪ್ರತಿಭಟನಾಕಾರರು ಬಲಿಯಾಗಿರುವ ಘಟನೆ ನಡೆದಿದೆ.   ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.  ಇಂದು ಮುಂಜಾನೆ ಕಾಶ್ಮೀರದಲ್ಲಿ ನಡೆದಿದೆ. ಇದರೊಂದಿಗೆ ಪ್ರಕ್ಷುಬ್ಧಗೊಂಡಿರುವ ಕಾಶ್ಮೀರ ಕಣಿವೆಯಲ್ಲಿ ಸತ್ತವರ ಸಂಖ್ಯೆ 60ಕ್ಕೆ ಏರಿದೆ.  ಕಳೆದ ಸುಮಾರು 40 ದಿನಗಳಿಂದಲೂ ಪ್ರತ್ಯೇಕತಾವಾದಿಗಳು ಮತ್ತು ಪಾಕ್ ಪರ ಸಂಘಟನೆಗಳ ಪ್ರತಿಭಟನೆಗಳು ನಡೆಯುತ್ತಲೇ ಇದ್ದು, ಸುದೀರ್ಘ ಕಾಲ ಕಾಶ್ಮೀರಿ ಜನತೆ ಕಫ್ರ್ಯೂ ನೆರಳಲ್ಲಿ ಬದುಕುತ್ತಿದ್ದಾರೆ.

ಘಟನೆ ವಿವರ:

ಕೇಂದ್ರ ಕಾಶ್ಮೀರದ ಬದ್ಗಮ್ ಜಿಲ್ಲೆಯ ಮಗಮ್ ಪ್ರದೇಶದ ಅರಿಪಠಾಣ್ ಪ್ರದೇಶದಲ್ಲಿ ಸಿಆರ್‍ಪಿಎಫ್ ಯೋಧರಿದ್ದ ವಾಹನದ ಮೇಲೆ ಯುವಕರ ಗುಂಪೊಂ ದು ಕಲ್ಲುಗಳನ್ನು ತೂರಿ ಹಿಂಸಾಚಾರಕ್ಕೆ ಇಳಿಯಿತು.  ಹಿಂಸಾಚಾರವನ್ನು ಹತ್ತಿಕ್ಕಲು ಮತ್ತು ಉದ್ರಿಕ್ತ ಗುಂಪನ್ನು ಚದುರಿಸಲು ಸಿಆರ್‍ಪಿಎಫ್ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಯುವಕರು ಸಾವಿಗೀಡಾಗಿ, ಇತರ ಆರು ಮಂದಿ ತೀವ್ರ ಗಾಯಗೊಂಡರು.  ಕಾಶ್ಮೀರ ಕಣಿವೆಯ ಹಲವೆಡೆ 39ನೆ ದಿನವಾದ ಇಂದು ಕೂಡ ಕಫ್ರ್ಯೂ ಮುಂದುವರಿದಿದೆ. ಇಡೀ ಶ್ರೀನಗರ ಜಿಲ್ಲೆ ಮತ್ತು ಅನಂತನಾಗ್ ಪಟ್ಟಣದಲ್ಲಿ ಕಫ್ರ್ಯೂ ಮುಂದುವರಿಸಲಾಗಿದ್ದು, ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.  ಕಣಿವೆಯಲ್ಲಿನ ಮುಖ್ಯ ಮಾರುಕಟ್ಟೆ ಸ್ಥಳಗಳಲ್ಲಿ ನಾಗರಿಕರ ಹತ್ಯೆ ವಿರುದ್ಧ ಪ್ರತ್ಯೇಕತಾವಾದಿಗಳು ಧರಣಿ ನಡೆಸಲು ಬೆದರಿಕೆ ಹಾಕಿದ್ದರಿಂದ ಇನ್ನೂ ಕೆಲವು ಪ್ರದೇಶಗಳಲ್ಲಿ ಕಫ್ರ್ಯೂ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಕಾಶ್ಮೀರ ಕಣಿವೆಯಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣವಿದ್ದು, ಯಾವುದೇ ಪರಿಸ್ಥಿತಿ ನಿಭಾಯಿಸಲು ಸೇನಾಪಡೆಗಳು ಸಜ್ಜಾಜಗಿವೆ.

► Follow us on –  Facebook / Twitter  / Google+

Facebook Comments

Sri Raghav

Admin