ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪಾಕ್ ಆರ್ಥಿಕ ನೆರವು

ಈ ಸುದ್ದಿಯನ್ನು ಶೇರ್ ಮಾಡಿ

fzg

ನವದೆಹಲಿ, ಆ.17- ಹಿಜ್ಬುಲ್ ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಸಂಬಂಧ ಹೊತ್ತಿ ಉರಿಯುತ್ತಿರುವ ಕಾಶ್ಮೀರ ಗಲಭೆಗಾಗಿ ಪಾಕಿಸ್ತಾನದಿಂದಲೇ ಆರ್ಥಿಕ ನೆರವು ಹರಿದು ಬರುತ್ತಿರುವ ಕುರಿತು ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ಕಲೆ ಹಾಕಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಪಾಕಿಸ್ತಾನ ಸುಮಾರು 24 ಕೋಟಿ ರೂ.ಹಣ ವ್ಯಯಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಬಿತ್ತರಿಸಿದ್ದು, ಕಾಶ್ಮೀರದಾದ್ಯಂತ ಹಬ್ಬಿರುವ ಗಲಭೆ ತಣ್ಣಗಾಗದಿರುವಂತೆ ನೋಡಿಕೊಳ್ಳಲು ಪಾಕಿಸ್ತಾನ ಮತ್ತು ಅದರ ಪ್ರಾಯೋಜಕತ್ವದ ಉಗ್ರ ಸಂಘಟನೆಗಳು ಹರಸಾಹಸ ಪಡುತ್ತಿದ್ದು, ಭಾರತೀಯ ಸೇನೆಯತ್ತ ಕಲ್ಲು ತೂರಾಟ ನಡೆಸಲು ಯುವಕರಿಗೆ ಹಣ ನೀಡಿ ಪೋಷಣೆ ಮಾಡುತ್ತಿವೆಯಂತೆ.

ಇನ್ನು ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಗಡಿ ದಾಟಿ ಭಾರತಕ್ಕೆ ಹಣ ಹೇಗೆ ಬರುತ್ತದೆ ಎಂಬ ಪ್ರಶ್ನೆಗೂ ವರದಿಯಲ್ಲಿ ಉತ್ತರ ನೀಡಲಾಗಿದ್ದು, ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ತಮ್ಮ ವಿವಿಧ ಮೂಲಗಳಿಂದ ಈ ಹಣವನ್ನು ಭಾರತಕ್ಕೆ ತರುತ್ತಾರಂತೆ. ಇದಲ್ಲದೆ, ಹವಾಲಾ ದಂಧೆ ಮೂಲಕವೂ ಈ ಹಣ ಭಾರತದಲ್ಲಿರುವ ಕಾಶ್ಮೀರಿ ಉದ್ಯಮಿಗಳಿಂದ ಪ್ರತ್ಯೇಕತಾವಾದಿಗಳ ಕೈಸೇರುತ್ತಿದೆಯಂತೆ.   ಈ ಪ್ರಕ್ರಿಯೆ ಪ್ರಮುಖ ವಾಗಿ ಕೇಂದ್ರ ಸರ್ಕಾರ ಎರಡು ಸಂಘಟನೆಗಳನ್ನು ಗುರುತಿ ಸಿದ್ದು, ಜಮಾತ್ ಇ ಇಸ್ಲಾಮಿ ಮತ್ತು ಏಸಿಯಾ ಅಂದ್ರಾಬಿ ನೇತೃತ್ವದ ದುಖ್ತ್ರಾನನ್ ಇ ಮಿಲ್ಲತ್ ಸಂಸ್ಥೆ ಪಾಕಿಸ್ತಾನದಿಂದ ಭಾರತಕ್ಕೆ ಹಣ ವರ್ಗಾವಣೆ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ಪಾಕಿಸ್ತಾನ ಬೆಂಬಲಿತ ಉಗ್ರರು ಕೂಡ ಕಾಶ್ಮೀರಕ್ಕೆ ನುಸುಳಿದ್ದು, ಇವರ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಬೆಂಕಿ, ಸೇನಾ ಪಡೆಗಳ ಮೇಲೆ ದಾಳಿ ಅವರ ಶಸ್ತ್ರಾಸ್ತ್ರ ದರೋಡೆ ಸೇರಿದಂತೆ ಹಲವು ಕುಕೃತ್ಯಗಳನ್ನು ನಡೆಸಲಾಗುತ್ತಿದೆ.  ಬುರ್ಹಾನ್ ವಾನಿ ಯಾರೆಂದೇ ತಿಳಿಯದ ಯುವಕರಿಂದಲೂ ಸೈನಿಕರ ಮೇಲೆ ಕಲ್ಲು ತೂರಾಟ: ಮತ್ತೊಂದು ಆಘಾತಕಾರಿ ಅಂಶವೆಂದರೆ ರಾಷ್ಟೀಯ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ತಜ್ಞರೊಬ್ಬರು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಪಾಲ್ಗೊಂಡಿರುವ ಯುವಕರ ಪೈಕಿ ಬಹುತೇಕರಿಗೆ ತಾವು ನಡೆಸುತ್ತಿರುವ ಹಿಂಸಾಚಾರಕ್ಕೆ ಕಾರಣವೇ ತಿಳಿದಿಲ್ಲವಂತೆ. ಯಾರೋ ಹೇಳಿದರು ಅಥವಾ ಮತ್ಯಾರೋ ಪ್ರತ್ಯೇಕತಾವಾದಿಗಳು ಕರೆ ನೀಡಿದರು ಎಂದು ಹಿಂಸಾಚಾರ ನಡೆಸಲಾಗುತ್ತಿದೆಯಂತೆ.

ಮತ್ತೊಂದಿಷ್ಟು ಯುವಕರಿಗೆ ಸೇನಾ ಪಡೆಯಿಂದ ಹತ್ಯೆಗೊಳಗಾದ ಹಿಜ್ಬುಲ್ ಕಮಾಂಡರ್ ಉಗ್ರ ಬುರ್ಹಾನ್ ವಾನಿ ಯಾರೆಂದೇ ತಿಳಿದಿಲ್ಲ. ಆತನನ್ನು ಒಮ್ಮೆಯೂ ನೋಡಿಲ್ಲದಿದ್ದರೂ, ಆತನ ಸಾವಿನ ವಿಚಾರವಾಗಿ ಸೇನಾಪಡೆಗಳತ್ತ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ, ಕಾಶ್ಮೀರ ವಿಚಾರವಾಗಿ ಅಂತಾ ರಾಷ್ಟ್ರೀಯ ಸಮುದಾಯದೆದುರು ಭಾರತವನ್ನು ಖಳನಾಯಕನಾಗಿ ಬಿಂಬಿಸುವ ಸಕಲ ಕಾರ್ಯಗಳನ್ನೂ ಪಾಕಿಸ್ತಾನ ಮಾಡುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin