ಕಾಶ್ಮೀರದಲ್ಲಿ ಹಿಂಸಾಚಾರ : ಪೊಲೀಸರ ಗುಂಡಿಗೆ ಪ್ರತಿಭಟನಾಕಾರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Kashmir-Voilence

ಶ್ರೀನಗರ, ಜೂ.16-ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮುಂದುವರಿದಿದ್ದು, ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾಪಡೆಗಳು ನಡೆಸಿದ ಗೋಲಿಬಾರ್‍ನಲ್ಲಿ ಪ್ರತಿಭಟನಾಕಾರನೊಬ್ಬ ಮೃತಪಟ್ಟಿದ್ದು ಕೆಲವರು ಗಾಯಗೊಂಡ ಘಟನೆ ರಾಜಧಾನಿ ಶ್ರೀನಗರದ ಹೊರವಲಯದ ರಂಗ್ರೇತ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.   ಭದ್ರತಾ ಪಡೆ ವಾಹನಗಳ ಮೇಲೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿ ಹಿಂಸಾಚಾರಕ್ಕೆ ಇಳಿಯಿತು. ಉದ್ರಿಕ ಪ್ರತಿಭಟನೆಕಾರರನ್ನು ಹತ್ತಿಕ್ಕಲು ಯೋಧರು ಗುಂಡು ಹಾರಿಸಿದಾಗ 22 ವರ್ಷದ ಯುವಕನೊಬ್ಬ ಮೃತಪಟ್ಟ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.  ಗೋಲಿಬಾರ್‍ನಿಂದ ತೀವ್ರ ಗಾಯಗೊಂಡ ನಾಸಿರ್ ಅಹಮದ್ ಸೌರಾ ಜಿಲ್ಲೆಯ ಎಸ್‍ಕೆಐಎಂಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ.

Kashmir

ಉಗ್ರರ ದಾಳಿ ಪೊಲೀಸರಿಗೆ ಗಾಯ :

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಯಥಾಪ್ರಕಾರ ಮುಂದುವರಿದಿದೆ. ಶ್ರೀನಗರದ ಹೊರವಲಯದ ಹೈದರ್‍ಪೊರಾ ಪ್ರದೇಶದಲ್ಲಿ ಜೆ ಅಂಡ್ ಕೆ ಬ್ಯಾಂಕ್ ಶಾಖೆ ಬಳಿ ಉಗ್ರರು ನಡೆಸಿದ ದಾಳಿಯಲ್ಲಿ ಕೆಲ ಪೊಲೀಸರು ಗಾಯಗೊಂಡಿದ್ದಾರೆ.   ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಸೇನಾ ಪಡೆಗಳು ಮೂರು ಗಂಭೀರ ಸವಾಲುಗಳನ್ನು ಎದುರಿಸುವಂತಾಗಿದೆ.

ಒಂದೆಡೆ ಗಡಿಯಲ್ಲಿ ಪಾಕಿಸ್ತಾನ ಯೋಧರ ಕದನ ವಿರಾಮ ಉಲ್ಲಂಘನೆ, ಇನ್ನೊಂದಡೆ ಉಗ್ರರ ನಿರಂತರ ಒಳನುಸುಳುವಿಕೆ ಯತ್ನ ಹಾಗೂ ಮತ್ತೊಂದೆಡೆ ಕಾಶ್ಮೀರಿ ಯುವಕರಿಂದ ಯೋಧರ ಮೇಲೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin