ಕಾಶ್ಮೀರದ ಪರ್ವತ ಪ್ರದೇಶದ ರಸ್ತೆಯಲ್ಲಿ ನದಿಗೆ ಬಸ್ ಉರುಳಿ 23 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

23-Killed

ಮುಜಫರಾಬಾದ್, ಸೆ.24-ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪರ್ವತ ಪ್ರದೇಶ ರಸ್ತೆಯಿಂದ ನಿನ್ನೆ ಮಿನಿ ಬಸ್ಸೊಂದು ನದಿಗೆ ಉರುಳಿ ಕನಿಷ್ಟ 23 ಮಂದಿ ದುರಂತ ಸಾವಿಗೀಡಾಗಿದ್ದಾರೆ.
ಮುಜಫರಾಬಾದ್ನ ಉತ್ತರಕ್ಕೆ ಸುಮಾರು 45 ಕಿ.ಮೀ.ದೂರದಲ್ಲಿರುವ ನೌಸೆಹ್ರಿಯಲ್ಲಿ ನಿನ್ನೆ ರಾತ್ತಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ 100 ಮೀಟರ್ ಅಳದ ನದಿಗೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಈ ದುರಂತದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದು, ಮೂರು ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿ ಅಶ್ಫಾಕ್ ಗಿಲಾನಿ ಹೇಳಿದ್ದಾರೆ. ( ಇದನ್ನೂ ಓದಿ : ವಾಷಿಂಗ್ಟನ್‍ನ ಮಾಲ್ ಒಂದರಲ್ಲಿ ಗುಂಡಿನ ದಾಳಿ, 4 ಮಂದಿ ಬಲಿ )

ಮೂರು ಮೃತದೇಹಗಳನ್ನು ಹೊರತೆಗೆಯಲು ಮತ್ತು ಮೂವರು ಗಾಯಾಳುಗಳನ್ನು ಮಾತ್ರ ರಕ್ಷಿಸಲು ನಮಗೆ ಸಾಧ್ಯವಾಗಿದೆ. ನದಿಯ ರಭಸಕ್ಕೆ ಮಿನಿಬಸ್ ಮತ್ತು ಅದರಲ್ಲಿದ್ದ 20 ಪ್ರಯಾಣಿಕರು ಕೊಚ್ಚಿಕೊಂಡು ಹೋಗಿದ್ದು, ಅವರು ಬದುಕುಳಿದ ಸಾಧ್ಯತೆಗಳಿಲ್ಲ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin