ಕಾಶ್ಮೀರದ ಪಲ್ವಾಮಾ ಜಿಲ್ಲೆಯಲ್ಲಿ ಯೋಧರ ಜತೆ ಗುಂಡಿನ ಚಕಮಕಿ : ಉಗ್ರರು ಪರಾರಿ
ಈ ಸುದ್ದಿಯನ್ನು ಶೇರ್ ಮಾಡಿ
ಶ್ರೀನಗರ, ಮಾ.17- ಕಾಶ್ಮೀರ ಕಣಿವೆಯಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಪಲ್ವಾಮಾ ಜಿಲ್ಲೆಯ ಶೋಪಿಯಾನ್ನ ಬಟ್ನೂರ್ ಗ್ರಾಮದಲ್ಲಿ ಭದ್ರತಾಪಡೆ ಮತ್ತು ಉಗ್ರರ ನಡುವೆಇಂದು ಮುಂಜಾನೆ ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ಯೋಧರ ತೀವ್ರ ದಾಳಿಗೆ ಹೆದರಿ ಉಗ್ರರು ಪರಾರಿಯಾಗಿದ್ದಾರೆ.
ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಲಭಿಸಿದ ಖಚಿತ ಸುಳಿವಿನ ಮೇರೆ ಯೋಧರು ತೀವ್ರ ಶೋಧ ನಡೆಸುತ್ತಿದ್ದರು. ಆಗ ಉಗ್ರರು ಗುಂಡು ಹಾರಿಸಿದಾಗ ಕೆಲಕಾಲ ಎನ್ಕೌಂಟರ್ ನಡೆಯಿತು. ಯೋಧರ ಕೈ ಮೇಲಾಗುತ್ತಿದ್ದಂತೆ ಭಯೋತ್ಪಾದಕರು ಕತ್ತಲಲ್ಲಿ ಕಣ್ಮರೆಯಾದರು. ಈ ಗುಂಡಿನ ಚಕಮಕಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments