ಕಾಶ್ಮೀರದ ಬತಾಲಿಕ್‍ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಮೂವರು ಯೋಧರ ಪೈಕಿ ಇಬ್ಬರು ಶವವಾಗಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Jammu-Kahmir--01

ಶ್ರೀನಗರ, ಏ.7 :  ಜಮ್ಮು ಮತ್ತು ಕಾಶ್ಮೀರದ ಬತಾಲಿಕ್‍ನಲ್ಲಿ ತೀವ್ರ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೂವರು ಸೈನಿಕರ ಪೈಕಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮತ್ತೊಬ್ಬ ಸೈನಿಕನ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಲಡಾಕ್ ಜಿಲ್ಲೆಯ ಬಟಾಲಿಕ್ ನಲ್ಲಿ ಗುರುವಾರ ಭಾರಿ ಹಿಮಪಾತ ಸಂಭವಿಸಿತ್ತು. ಈ ವೇಳೆ ಕರ್ತವ್ಯನಿರತ ಐವರು ಯೋಧರು ನಾಪತ್ತೆಯಾಗಿದ್ದರು. ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದ ಭಾರತೀಯ ಸೇನೆ ನಾಲ್ವರು ಯೋಧರನ್ನು ರಕ್ಷಣೆ ಮಾಡಿತ್ತು. ಇದರಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ.

ಲಡಾಕ್ ಜಿಲ್ಲೆಯ ಬತಾಲಿಕ್‍ನಲ್ಲಿ ಗುರುವಾರ ಭಾರೀ ಹಿಮಪಾತ ಸಂಭವಿಸಿದಾಗ ಐದು ಮಂದಿ ಸೈನಿಕರು ಅಲ್ಲಿದ್ದರು. ಈ ಪೈಕಿ ಇಬ್ಬರನ್ನು ಪಾರು ಮಾಡಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಗುರುವಾರ ಧಾರಾಕಾರ ಮಳೆಯಾಗಿದ್ದು, ಪರಿಣಾಮವಾಗಿ ಬಯಲು ಪ್ರದೇಶದಲ್ಲಿ ವ್ಯಾಪಕ ಹಿಮಪಾತ ಆಗಿತ್ತು. ಇದರಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಣಿವೆಯ ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸೇನಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಐವರ ಪೈಕಿ ಓರ್ವ ಯೋಧ ಈಗಲೂ ನಾಪತ್ತೆಯಾಗಿದ್ದು, ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಸೇನಾಪಡೆ ಯೋಧನಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಕಳೆದ 2-3 ದಿನಗಳಿಂದ ಕಣಿವೆ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಎತ್ತರದ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಹಿಮಪಾತ ಹೆಚ್ಚಾದ ಕಾರಣ ಬಟಾಲಿಕ್ ಸೆಕ್ಟರïನಲ್ಲಿ ಹಲವೆಡೆ ಹಿಮ ಕುಸಿದಿದೆ. ಸೇನಾ ಶಿಬಿರದ ಮೆಲೆ ಹಿಮ ಕುಸಿದ ಪರಿಣಾಮ ಇಬ್ಬರು ಯೊಧರು ಮೃತಪಟ್ಟಿದ್ದಾರೆ. ಐವರು ಯೊಧರು ಹಿಮದಡಿ ಸಿಲುಕಿದ್ದ ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಸ್ತುತ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಲ್ಲಿ ಗುರುವಾರದಿಂದ ಇಲ್ಲಿಯವರೆಗೆ 83.9 ಎಂಎಂ ಮಳೆ ಮತ್ತು ಹಿಮಪಾತವಾಗಿದೆ. ದಕ್ಷಿಣ ಕಾಶ್ಮಿರದ ಕೊಕೆನಾರ್ಗನಲ್ಲೂ ಸಹ ತಿವ್ರ ಮಳೆ ಮುಂದುವರೆದಿದ್ದು, 69.9 ಎಂಎಂ ಮಳೆಯಾಗಿದೆ. ದಕ್ಷಿಣ ಕಾಶ್ಮಿರದ ಪಹಲ್ಗಾಮಿ ಬುಧವಾರದಿಂದೀಚೆಗೆ 64.2 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಳೆದ ಹಲವು ದಿನಗಳಿಂದಲೂ ಮಂಜು ಸಹಿತ ಧಾರಾಕಾರ ಮಳೆಯಾಗುತ್ತಿದೆ.ನಿನ್ನೆ ಕೂಡ ತೀವ್ರ ಮಳೆಯಾಗಿದ್ದು, ಪರಿಣಾಮ ಬಯಲು ಪ್ರದೇಶದಲ್ಲಿ ವ್ಯಾಪಕ ಹಿಮಪಾತ ಸಂಭವಿಸಿತ್ತು. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಭೀತಿ ಎದುರಾಗಿತ್ತು. ಪ್ರವಾಹ ಎಚ್ಚರಿಕೆ ಹಿನ್ನಲೆಯಲ್ಲಿ ಕಣಿವೆಯ ತಗ್ಗು ಪ್ರದೇಶಗಳಲ್ಲಿ ವಾಸವಿದ್ದ ಜನರನ್ನು ಸೇನಾ ಪಡೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿತ್ತು.
ಭಾರೀ ಮಳೆಯಿಂದಾಗಿ ಗುರುವಾರ ರಾಷ್ಟ್ರಿಯ ಹೆದ್ದಾರಿ 1ಬಿಯಲ್ಲಿ ಭೂಕುಸಿತ ಸಂಭವಿಸಿ ಹೆದ್ದಾರಿ ಬಂದ್ ಆಗಿತ್ತು. ಜೀಲಂ ನದಿ ಅಪಾಯದ ಮಟ್ಟ ಮಿರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೊರಿದೆ.ಕಳೆದ ಜನವರಿ 26ರಂದು ಕಾಶ್ಮೀರದ ಬಂಡೀಪುರ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ 10 ಮಂದಿ ಸೈನಿಕರು ಜೀವ ಕಳೆದುಕೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin