ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಗುಂಡಿನ ಚಕಮಕಿ : ಓರ್ವ ಉಗ್ರನ ಹತ್ಯೆ
ಈ ಸುದ್ದಿಯನ್ನು ಶೇರ್ ಮಾಡಿ
ಜಮ್ಮು, ಫೆ.21-ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಬಿಎಸ್ಎಫ್ ಯೋಧರು, ಆತಂಕವಾದಿಯೊಬ್ಬನನ್ನು ಗುಂಡಿಟ್ಟು ಕೊಂದಿದ್ದಾರೆ. ರಜೌರಿಯ ಕೇರಿ ಸೆಕ್ಟರ್ನ ಎಲ್ಒಸಿ ಬಳಿ ಪಹರೆಯಲ್ಲಿದ್ದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರಿಗೆ ನಿನ್ನೆ ಮಧ್ಯರಾತ್ರಿ ಬೇಲಿಯಾಚೆ ಶಂಕಾಸ್ಪದ ಚಲನವಲನಗಳು ಕಂಡುಬಂದಿತು. ಇದೇ ವೇಳೆ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದಾಗ 30 ನಿಮಿಷಗಳ ಕಾಲ ಎನ್ಕೌಂಟರ್ ನಡೆಯಿತು. ನಂತರ ಉಗ್ರರ ಕಡೆಯಿಂದ ಗುಂಡಿನ ದಾಳಿ ನಿಂತಿತು.
ಮುಂಜಾನೆ ಆ ಪ್ರದೇಶವನ್ನು ಶೋಧಿಸಿದಾಗ ಉಗ್ರನೊಬ್ಬನ ಶವ ಪತ್ತೆಯಾಯಿತು. ಆ ಸ್ಥಳದಿಂದ ಪಾಕಿಸ್ತಾನದ ಗುರುತು ಇರುವ ಎಕೆ-47 ರೈಫಲ್, ಮದ್ದುಗುಂಡುಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments