‘ಕಾಶ್ಮೀರದ ಸ್ವಾತಂತ್ರ್ಯ’ ಹೆಸರಿನಲ್ಲಿ ಪಾಕ್ ಸ್ವಾತಂತ್ರ್ಯೋತ್ಸವ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

pak--av

ನವದೆಹಲಿ, ಆ.14- ಕಾಶ್ಮೀರದ ಸ್ವಾತಂತ್ರ್ಯ ಹೆಸರಿನಲ್ಲಿ ಪಾಕಿಸ್ತಾನವು ತನ್ನ 70ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ ಎಂದು ದೆಹಲಿಗೆ ಪಾಕಿಸ್ತಾನದ ಹೈಕಮಿಷನರ್ ಆಗಿರುವ ಆಬ್ದುಲ್ ಬಸಿತ್ ಹೇಳಿದ್ದಾರೆ.   ಈ ಮೂಲಕ ಕಾಶ್ಮೀರದ ಬಗ್ಗೆ ತಾನು ಹೊಂದಿರುವ ನಿಲುವನ್ನು ಪಾಕ್ ಮತ್ತೊಮ್ಮೆ ದೃಢಪಡಿಸಿದಂತಾಗಿದೆ.  ಪಾಕಿಸ್ತಾನದ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವು ಕಾಶ್ಮೀರ ಸ್ವಾತಂತ್ರ ಆಗಬೇಕು ಎಂಬ ಘೋಷಣೆಗೆ ಸಮರ್ಪಣೆಯಾಗಲಿದೆ ಎಂದು ಅವರು ಹೇಳಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.  ಕಾಶ್ಮೀರ(ಭವಿಷ್ಯ) ಸ್ವಾತಂತ್ರ್ಯದ ಹೆಸರಿನಲ್ಲಿ ಪಾಕ್ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ ಎಂದು ಬಸಿತ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

► Follow us on –  Facebook / Twitter  / Google+

will  its celebration to ‘Kashmir’s freedom’: Pak high commissioner to Delhi

Facebook Comments

Sri Raghav

Admin