ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆ ಮೇಲೆ ದಾಳಿಗೆ 300 ಉಗ್ರರ ಸಂಚು

ಈ ಸುದ್ದಿಯನ್ನು ಶೇರ್ ಮಾಡಿ

Terrorist--001

ಶ್ರೀನಗರ, ಮೇ 9– ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 200 ಉಗ್ರರು ಅಡಗಿ ಕುಳಿತಿದ್ದು, ಸೇನೆಯ ವಿರುದ್ಧ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾರೆ. ಅವರಲ್ಲಿ 110 ಉಗ್ರರು ಸ್ಥಳೀಯರು ಉಳಿದವರು ಹೊರಗಿನಿಂದ ಬಂದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.  ಕಳೆದ ವರ್ಷ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉಗ್ರ ಬುರ್ಹಾನ್ ವನಿಯನ್ನು ಹತ್ಯೆ ಮಾಡಿದ ನಂತರ ರಾಜ್ಯದಲ್ಲಿ ಹಿಂಸಾಚಾರ ಬುಗಿಲೆದ್ದಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 95 ಕಾಶ್ಮೀರಿ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಇತ್ತೀಚೆಗೆ ನಡೆಯುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಲಷ್ಕರ್ ಎ ತೋಯೆಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳು ಭಾಗಿಯಾಗಿವೆ. ಉಗ್ರ ಸಂಘಟನೆಗಳು ಹಣದ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಬ್ಯಾಂಕ್ ಲೂಟಿ ಮಾಡುತ್ತಿವೆ. 2016ರ ನವೆಂಬರ್ 21 ರಿಂದ 2017ರ ಮೇ 3 ರವರೆಗೆ ಉಗ್ರರು ವಿವಿಧ ಬ್ಯಾಂಕುಗಳಿಂದ ಒಟ್ಟು 90.87 ಲಕ್ಷ ರೂ. ಹಣವನ್ನು ಲೂಟಿ ಮಾಡಿದ್ದಾರೆ ಎಂದು ಐಜಿಪಿ ಎಸ್?ಜೆಎಂ ಗಿಲ್ಲಾ ತಿಳಿಸಿದ್ದಾರೆ.  ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಮಾಡಲು ವಿದ್ಯಾರ್ಥಿಗಳಿಗೆ ಹೊರಗಿನ ವ್ಯಕ್ತಿಗಳಿಂದ ಹಣ ಸಂದಾಯವಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಹೊರಗಿನ ವ್ಯಕ್ತಿಗಳು ಒಡ್ಡುವ ಆಮಿಷಕ್ಕೆ ಬಲಿಯಾಗಬಾರದು. ಪ್ರಸ್ತುತ ರಾಜ್ಯದಲ್ಲಿ ಸಾಮಾಜಿಕ ಜಾಲ ತಾಣಗಳ ಮೇಲೆ 1 ತಿಂಗಳ ಕಾಲ ನಿಷೇಧ ಹೇರಲಾಗಿದೆ. ನಿಷೇಧದ ಪರಿಣಾಮದ ಕುರಿತು ಒಂದು ತಿಂಗಳ ನಂತರ ತಿಳಿಯಲಿದೆ ಎಂದು ಗಿಲ್ಲಾ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin