ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತ : ಹೆದ್ದಾರಿ ಬಂದ್, ಸಂಪರ್ಕ ಕಡಿತ

ಈ ಸುದ್ದಿಯನ್ನು ಶೇರ್ ಮಾಡಿ

Snow-fall

ಶ್ರೀನಗರ, ಜ.7-ಕಾಶ್ಮೀರ ಕಣಿವೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಹಿಮವರ್ಷದಿಂದಾಗಿ ಎರಡನೇ ದಿನವಾದ ಇಂದೂ ಸಹ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಡಿದುಕೊಂಡಿದೆ.   ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಇಂದೂ ಕೂಡ ಬಂದ್ ಆಗಿದೆ. ವಾಹನಗಳು ಮತ್ತು ವಿಮಾನ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ದೇಶದ ಇತರ ಭಾಗಗಳ ಜೊತೆ ಕಣಿವೆ ರಾಜ್ಯದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.  ರಾಜಧಾನಿ ಶ್ರೀನಗರದಲ್ಲಿ 6.1 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಲೆಹ್‍ನಲ್ಲಿ ಮೈನಸ್ 9.5 ಡಿಗ್ರಿ, ಕಾರ್ಗಿಲ್‍ನಲ್ಲಿ ಮೈನಸ್ 9 ಡಿಗ್ರಿ ಉಷ್ಣಾಂಶವಿದೆ. ಶ್ರೀನಗರ ಸೇರಿದಂತೆ ರಾಜ್ಯದ ಬಹುತೇಕ ನಗರ-ಪಟ್ಟಣಗಳ ರಸ್ತೆಗಳು, ಮನೆಗಳು, ಉದ್ಯಾನವನಗಳು ಹಿಮ ವರ್ಷಧಾರೆಯಿಂದ ಮಂಜಿನ ಗಡ್ಡೆಗಳಿಂದ ಅವೃತವಾಗಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin