ಕಾಶ್ಮೀರ ಕಣಿವೆಯಲ್ಲಿ ಲಘು ಭೂಕಂಪನ

ಈ ಸುದ್ದಿಯನ್ನು ಶೇರ್ ಮಾಡಿ

Earthquake--001

ನವದೆಹಲಿ, ಮಾ.10- ದೇಶದ ಕಣಿವೆ ರಾಜ್ಯ ಎಂದೇ ಬಿಂಬಿತವಾಗಿರುವ ಜಮ್ಮುಕಾಶ್ಮೀರದಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಉಂಟಾಗಿದೆ. ಇಂದು ಬೆಳಗ್ಗೆ ಸಂಭವಿಸಿದ ಭೂಕಂಪದಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.  ರಿಕ್ಟರ್‍ಮಾಪಕದಲ್ಲಿ ಭೂಕಂಪದ ತೀವ್ರತೆ 4.5 ರಷ್ಟಿದ್ದು ಸುಮಾರು 10 ಕಿಲೋಮೀಟರ್‍ಗಳವರೆಗೆ ಭೂಮಿ ಕಂಪಿಸಿದೆ. ಜಮ್ಮು ಕಾಶ್ಮೀರದ ಹಲವು ಪ್ರಮುಖ ನಗರಗಳಲ್ಲೂ ಕೂಡ ಭೂಮಿ ಕಂಪಿಸಿದ್ದು ಭೀತಿಗೊಂಡ ಜನರು ತಮ್ಮ ಜೀವ ರಕ್ಷಿಸಿಕೊಳ್ಳಲು ಮನೆಯಿಂದ ಹೊರ ಓಡಿ ಬಂದರಾದರೂ ಎಲ್ಲೂ ಯಾವುದೇ ಅನಾಹುತ ಸಂಭವಿಸಿಲ್ಲ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin