ಕಾಶ್ಮೀರ ಬಿಕ್ಕಟ್ಟು ಕುರಿತು ಟರ್ಕಿ ಅಧ್ಯಕ್ಷರ ಸಲಹೆ ಸ್ವಾಗತಿಸಿದ ಪಾಕಿಸ್ತಾನ
ಇಸ್ಲಾಮಾಬಾದ್, ಮೇ 2- ಕಾಶ್ಮೀರ ಬಿಕ್ಕಟ್ಟು ಬಹುಪಕ್ಷೀಯವಾಗಿದ್ದು, ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಟರ್ಕಿ ಅಧ್ಯಕ್ಷ ರಿಸೆಪ್ತಯ್ಯಪಿ ಎಡೋಗನ್ ನೀಡಿದ್ದ ಸಲಹೆಯನ್ನು ಪಾಕಿಸ್ತಾನ ಸ್ವಾಗತಿಸಿದೆ.ಭಾರತ ಪ್ರವಾಸ ಆರಂಭಕ್ಕೂ ಮೊದಲು ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಟರ್ಕಿ ಅಧ್ಯಕ್ಷ ಈ ವಿಷಯ ಪ್ರಸ್ತಾಪಿಸಿದ್ದರು. ಕಾಶ್ಮೀರ ವಿವಾದವನ್ನು ಬಹುಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇಲ್ಲಿ ಇನ್ನಷ್ಟು ಸಾವು-ನೋವುಗಳಿಗೆ ಅವಕಾಶ ನೀಡಬಾರದೆಂದು ಸಲಹೆ ನೀಡಿದ್ದರು. ಈ ಹೇಳಿಕೆಯನ್ನು ಪಾಕಿಸ್ತಾನ ಸ್ವಾಗತಿಸಿದೆ ಎಂದು ಪಾಕ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಟರ್ಕಿ ಅಧ್ಯಕ್ಷರ ಸಲಹೆಗೆ ಭಾರತದ ಆಕ್ಷೇಪ ವ್ಯಕ್ತಪಡಿಸಿದ್ದು, ಜಮ್ಮು-ಕಾಶ್ಮೀರದ ವಿವಾದವನ್ನು ದ್ವಿಪಕ್ಷೀಯ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು. ಮೂರನೆಯವರು ಈ ವಿಷಯದಲ್ಲಿ ಪಾಲ್ಗೊಳ್ಳಬಾರದು ಎಂಬುದು ಭಾರತದ ಸ್ಪಷ್ಟ ಧೋರಣೆಯಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS