ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಿ : ಬ್ರಿಟಿಷ್ ಪ್ರಧಾನಿ ತೆರೇಸಾ
ಲಂಡನ್, ಅ.27- ಕಾಶ್ಮೀರ ವಿಷಯದಲ್ಲಿ ಇಂಗ್ಲೆಂಡ್ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿರುವ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ, ಈ ವಿವಾದವನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಹೌಸ್ ಆಫ್ ಕಾಮನ್ಸ್ನಲ್ಲಿ ನಿನ್ನೆ ಪ್ರಧಾನಿಯವರ ವಾರದ ಪ್ರಶ್ನೋತ್ತರ ಕಲಾಪದಲ್ಲಿ ಪಾಕಿಸ್ತಾನ ಮೂಲದ ಲೇಬರ್ ಪಕ್ಷದ ಸಂಸದೆ ಯಾಸ್ಮಿನ್ ಖುರೇಷಿ ಅವರ ಪ್ರಶ್ನೆಗೆ ಉತ್ತರವಾಗಿ ಮೇ ಈ ಸಲಹೆ ನೀಡಿದ್ದಾರೆ.
ಭಾರತಕ್ಕೆ ನವೆಂಬರ್ನಲ್ಲಿ ಭೇಟಿ ನೀಡಲಿರುವ ಪ್ರಧಾನಿಯವರು ಕಾಶ್ಮೀರ ವಿಷಯ ಕುರಿತು ಪ್ರಸ್ತಾಪಿಸುವರೆ ಎಂದು ಯಾಸ್ಮಿನ್ ಸ್ಪಷ್ಟೀಕರಣ ಬಯಸಿದರು. ಈ ವಿಷಯದಲ್ಲಿ ಬ್ರಿಟಿಷ್ ಸರ್ಕಾರ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಪಟ್ಟ ವಿಚಾರ ಹೀಗಾಗಿ ಅವೆರಡು ರಾಷ್ಟ್ರಗಳು ಪರಸ್ಪರ ಮಾತುಕತೆ ಮೂಲಕ ವಿವಾದ ಇತ್ಯರ್ಥಗೊಳಿಸುವುದು ಸೂಕ್ತ ಎಂದು ಅವರು ಉತ್ತರಿಸಿದರು. ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ನವೆಂಬರ್ 6ರಿಂದ 8ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.
► Follow us on – Facebook / Twitter / Google+