ಕಾಶ್ಮೀರ ಹಿಂಸಾಚಾರ ಕುರಿತು ಅಂತಾರಾಷ್ಟ್ರೀಯ ತನಿಖೆಯ ಅಗತ್ಯವಿದೆ : ಝೀಧ್‍ರಾದ್ ಅಲ್ ಹುಸೇನ್

ಈ ಸುದ್ದಿಯನ್ನು ಶೇರ್ ಮಾಡಿ

Human-Rights

ಜಿನಿವಾ, ಸೆ. 15-ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ತನಿಖೆ ನಡೆಯುವ ಜರೂರು ಅಗತ್ಯ ಇದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ(ಯುಎನ್‍ಎಚ್‍ಸಿಎಚ್‍ಆರ್) ಹೈ ಕಮಿಷನರ್ ಝೀಧ್‍ರಾದ್ ಅಲ್ ಹುಸೇನ್ ಹೇಳಿದ್ದಾರೆ.  ಯುಎನ್‍ಎಚ್‍ಸಿಎಚ್‍ಆರ್‍ನ 33ನೇ ಅಧಿವೇಶನದಲ್ಲಿ ಮಾತನಾಡಿದ ಹುಸೇನ್ ಕಾಶ್ಮೀರದಲ್ಲಿ ಕಳೆದ 70 ದಿನಗಳಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ತನಿಖೆ ನಡೆಯುವ ತುರ್ತು ಅಗತ್ಯವಿದೆ ಎಂದು ತಿಳಿಸಿ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಹಿಂಸಾಚಾರದ ಬಗ್ಗೆ ಹೇಳಿಕೆ ನೀಡಿದ್ದ ಹುಸೇನ್ ಅವರಿಗೆ ಭಾರತ ತಿರುಗೇಟು ನೀಡಿ ಖಾರವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಈ ವಿಷಯದಲ್ಲಿ ಹೈ ಕಮಿಷನ್ ಆಡಳಿತ ನೀತಿಯಲ್ಲೇ ಸ್ಫಷ್ಟತೆ ಇಲ್ಲ ಎಂದು ಟೀಕಿಸಿದ್ದ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಅಜಿತ್‍ಕುಮಾರ್, ಭಯೋತ್ಪಾದನೆ ಅತ್ಯಂತ ದೊಡ್ಡ ಮಾನವ ಹಕ್ಕಿನ ಉಲ್ಲಂಘನೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin