ಕಾಸರಗೋಡಿನ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಉನ್ನಿಕೃಷ್ಣನ್ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-e

ಮಂಗಳೂರು,ನ.9- ಪಾನಮತ್ತರಾಗಿ ಗಲಾಟೆ ಮಾಡಿ ವಿವಾದಕ್ಕೆ ಸಿಲುಕಿದ್ದ ಕಾಸರಗೋಡಿನ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಉನ್ನಿಕೃಷ್ಣನ್ ಅವರು ತಾವು ವಾಸವಿದ್ದ ಕ್ವಾರ್ಟರ್ಸ್ ನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ಮೂರು ದಿನಗಳ ಹಿಂದಷ್ಟೇ ನ.6ರಂದು ಪಾನಮತ್ತರಾಗಿ ಆಟೋ ಚಾಲಕ ಹಾಗೂ ಪೊಲೀಸರೊಂದಿಗೆ ಗಲಾಟೆ ಮಾಡಿದ ವಿಷಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಉನ್ನಿಕೃಷ್ಣನ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆದರೆ ಒಬ್ಬ ನ್ಯಾಯಾಧೀಶರಾಗಿ ಆತ್ಮಹತ್ಯೆಗೆ ಶರಣಾಗಿರುವ ಬಗೆ ಹಲವು ಅನುಮಾನಗಳು ಮೂಡಿದ್ದು ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

► Follow us on –  Facebook

Facebook Comments

Sri Raghav

Admin