ಕಿಂಗ್‍ಖಾನ್ ಬಯೋಗ್ರಫಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

SHARUK

ಯಾವುದೇ ಕ್ಷೇತ್ರವಿರಲಿ 25ರ ಸಂಖ್ಯೆಗೆ ತುಂಬಾ ಪ್ರಾಮುಖ್ಯತೆ ಇದೆ. ಚಿತ್ರರಂಗದ ವಿಷಯದಲ್ಲಂತೂ ಈ ನಂಬರ್ ಬಹು ಮಹತ್ವದ್ದು. ಕಿಂಗ್‍ಖಾನ್ ಎಂದೇ ಖ್ಯಾತರಾಗಿರುವ ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ತಮ್ಮ ವೃತ್ತಿ ಬದುಕಿನಲ್ಲಿ 25 ವರ್ಷಗಳ ದೀರ್ಘ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ದೂರದರ್ಶನ ಧಾರಾವಾಹಿಯ ಸಾಮಾನ್ಯ ಕಲಾವಿದನೊಬ್ಬ ಹಿಂದಿ ಚಿತ್ರರಂಗದ ಸಾಮ್ರಾಟನಾಗಿ ಬೆಳೆದಿದ್ದು ಬೆರಗು ಮೂಡಿಸುವಂಥ ಸಾಧನೆಯಲ್ಲದೇ ಮತ್ತೇನು ? ಎಸ್‍ಆರ್‍ಕೆ ರಜತ ಸಂಭ್ರಮವನ್ನು ಮುಂಬೈನಲ್ಲಿ ಬುಧವಾರ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಲೇಖಕ ಸಮರ್ ಖಾನ್ ಶಾರುಕ್ ಕುರಿತು ಬರೆದಿರುವ 25 ಇಯರ್ಸ್ ಆಫ್ ಎ ಲೈಫ್ ಎಂಬ ಶೀರ್ಷಿಕೆಯ ಜೀವನಚರಿತ್ರೆ ಬಿಡುಗಡೆಯಾಗಿದೆ. ಸ್ವತ: ಶಾರುಖ್ ಖಾನ್ ಈ ಪುಸಕ್ತವನ್ನು ಅನಾವರಣಗೊಳಿಸಿದರು.

ಸರ್ಕಸ್, ಫೌಜಿ ಟಿವಿ ಸೀರಿಯಲ್‍ಗಳಿಂದ ಜನಪ್ರಿಯರಾಗಿ ಬಾಝಿಗರ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಇವರ ಸಿನಿಪಯಣ ಆರಂಭವಾಯಿತು. ಸೋತಾಗ ಕುಗ್ಗದೇ ಗೆದ್ದಾಗ ಉಬ್ಬದೇ ಬಂದದ್ದೆಲ್ಲವನ್ನೂ ಸರಿಸಮನಾಗಿ ಸ್ವೀಕರಿಸಿ ಸಮಚಿತ್ತದಿಂದ ಹಂತಹಂತವಾಗಿ ಮೇಲೆರಿದ ಈ ಮಹಾಸಾಧಕನಿಗೆ ಅಭಿಮಾನಿಗಳು ದಯಪಾಲಿಸಿದ ಬಿರುದು ಬಾಲಿವುಡ್ ಬಾದ್‍ಶಾ. ವಿಶ್ವದ ಅತ್ಯಧಿಕ ಸಂಭಾವನೆ ಪಡೆಯುವ ಶ್ರೇಷ್ಠ 20 ನಟರಲ್ಲಿ ಎಸ್‍ಆರ್‍ಕೆ ಹೆಸರೂ ಇದೆ. ಶಾರುಖ್ ಸಾಗಿ ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಅದು ಕಲ್ಲು-ಮುಳ್ಳುಗಳ ದುರ್ಗಮ ಹಾದಿಯಾಗಿತ್ತು. ಇದನ್ನು ಈ ಸಮಾರಂಭದಲ್ಲಿ ಎಸ್‍ಆರ್‍ಕೆ ಹೇಳಿಕೊಂಡಿದ್ದಾರೆ. ನಾನು ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ. ಸಿನಿಮಾರಂಗದಲ್ಲಿ ನನಗೆ ಯಾರೂ ಗಾಡ್‍ಫಾದರ್ ಇರಲಿಲ್ಲ. ಆದರೂ ನನಗೆ ಅವಕಾಶ ನೀಡಿದ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಸಿನಿಮಾರಂಗದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಿಂಗ್‍ಖಾನ್ ಹೇಳಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin