ಕಿಕ್ಕಿರಿದು ತುಂಬಿದ್ದ ದೋಣಿ ನದಿಯಲ್ಲಿ ಮುಳುಗಿ 100ಕ್ಕೂ ಹೆಚ್ಚು ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

100-Dead
ಯಾನ್‍ಗೋನ್, ಅ.18-ಮಧ್ಯ ಮ್ಯಾನ್ಮಾರ್‍ನ ಮೋನಿವಾ ನಗರದ ಹೊಮಾಲಿನ್ ಬಳಿ ಚಿಂಡ್ವಾನ್ ನದಿಯಲ್ಲಿ ದೋಣಿಯೊಂದು ಮುಳುಗಿ ಸುಮಾರು 100 ಮಂದಿ ನೀರುಪಾಲಾಗಿದ್ದಾರೆ ಶಂಕಿಸಲಾಗಿದೆ. ದೋಣಿ ದುರಂತದಿಂದ 154 ಜನರನ್ನು ರಕ್ಷಿಸಲಾಗಿದ್ದು, ಈವರಗೆ 14 ಮೃತದೇಹಗಳು ಮಾತ್ರ ಪತ್ತೆಯಾಗಿವೆ. ಶೋಧ ಕಾರ್ಯ ಮುಂದುವರಿದಿದ್ದು, ನೀರುಪಾಲಾಗಿರುವವರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ. ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯೋಗಿಗಳೂ ಸೇರಿದಂತೆ 260ಕ್ಕೂ ಹೆಚ್ಚು ಮಂದಿಯಿಂದ ಕಿಕ್ಕಿರಿದಿದ್ದ ಈ ದೋಣಿ ಶನಿವಾರ ಮುಳುಗಡೆ ಯಾಗಿತ್ತು.

888

ಈ ದುರಂತದಲ್ಲಿ ಸುಮಾರು 100 ಮಂದಿ ಜಲ ಸಮಾಧಿಯಾಗಿರಬಹುದೆಂದು ರಕ್ಷಣಾ ಕಾರ್ಯಕರ್ತರು ಶಂಕಿಸಿದ್ದಾರೆ. 100 ಪ್ರಯಾಣಿಕರ ಸಾಮಥ್ರ್ಯದ ಈ ದೋಣಿಯಲ್ಲಿ 80ಕ್ಕೂ ಹೆಚ್ಚು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, 35 ಶಾಲಾ ಶಿಕ್ಷಕರು, ಕೆಲವು ವೈದ್ಯರು, ಉದ್ಯೋಗಿಗಳು ಸೇರಿದಂತೆ 260ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ದೋಣಿ ಕಿಕ್ಕಿರಿದು ತುಂಬಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

6

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin