ಕಿಚ್ಚ @ 43
ಬೆಂಗಳೂರು, ಸೆ.2– ಸ್ಯಾಂಡಲ್ವುಡ್ನ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ಗೆ ಇಂದು 43ರ ಹುಟ್ಟುಹಬ್ಬದ ಸಂಭ್ರಮ. ಭಾರತ್ ಬಂದ್ ಹಿನ್ನೆಲೆಯಲ್ಲೂ ಸಹ ಕಿಚ್ಚನ ಹುಟ್ಟುಹಬ್ಬ ಸಂಭ್ರಮ ಕಳೆಗುಂದದೆ ಅಭಿಮಾನಿಗಳು ವಿಜೃಂಭಣೆಯಿಂದಲೇ ಆಚರಿಸಿದರು. ರಾತ್ರಿಯಿಂದಲೇ ಅಭಿಮಾನಿಗಳು ಸುದೀಪ್ ಅವರ ಮನೆಯ ಬಳಿ ಜಮಾಯಿಸಿ ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಸ್ಪರ್ಶ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಿಚ್ಚ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ರನ್ನ, ವಿಷ್ಣುವರ್ಧನ, ಮುಸ್ಸಂಜೆ ಮಾತು, ನಮ್ಮಣ್ಣ, ನಲ್ಲ, ನಂದಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ತೆರೆ ಕಂಡ ಕೋಟಿಗೊಬ್ಬ-2 ಪ್ರೇಕ್ಷಕರ ಮನ ಗೆದ್ದಿದ್ದು, ವಿತರಕ, ನಿರ್ಮಾಪಕ ಚಿತ್ರ ತಂಡದ ಎಲ್ಲರಿಗೂ ಒಂದು ರೀತಿಯಲ್ಲಿ ಯಶಸ್ಸು ತಂದು ಕೊಟ್ಟಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳೆಲ್ಲಾ ನಿವಾರಣೆಯಾಗಿದ್ದು, ಈ ಬಾರಿ ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆಯಲ್ಲೇ ಸಡಗರದಿಂದ ಹುಟ್ಟುಹಬ್ಬ ಆಚರಿಸಿಕೊಂಡರು. ಭಾರತ್ ಬಂದ್ ಇದ್ದರೂ ಸಹ ನಾನಾ ಮೂಲೆಗಳಿಂದ ಆಗಮಿಸಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಹೂ ಮಾಲೆ ಹಾಕಿ ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು.
► Follow us on – Facebook / Twitter / Google+