ಕಿಟಕಿಯೊಳಗೆ ಕೈ ಹಾಕಿ 40 ಸಾವಿರ ರೂ. ಎಗರಿಸಿದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

pickpocket

ಕೊಪ್ಪಳ,ಆ26- ಮನೆಯ ಕಿಟಕಿಯ ಬಳಿ ನೇತು ಹಾಕಿದ್ದ ಪ್ಯಾಂಟಿನಿಂದ ಸುಮಾರು 40 ಸಾವಿರ ರೂಗಳನ್ನು ಕಳ್ಳರು ಎಗರಿಸಿದ ಘಟನೆ ನಗರದ ಧನ್ವಂತರಿ ಕಾಲೋನಿಯಲ್ಲಿ ನಡೆದಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮುನಿರಾಜು ಎಂಬುವವರೇ ಹಣ ಕಳೆದು ಕೊಂಡ ವ್ಯಕ್ತಿಯಾಗಿದ್ದಾರೆ. ಸೆಕೆಯಾದ ಕಾರಣ ಗಾಳಿ ಬರಲೆಂದು ಕಿಟಕಿಯ ಬಾಗಿಲು ತೆರೆದು ಮಲಗಿ ಕೊಂಡಿದ್ದರು. ಕಿಟಕಿಯ ಬಳಿಯೇ ಪ್ಯಾಂಟು ನೇತು ಹಾಕಿದ್ದರು. ಇದನ್ನು ಗಮನಿಸಿದ ಚಾಲಾಕಿ ಕಳ್ಳರು ಕೋಲಿನ ಸಹಾಯದಿಂದ ಕಿಟಕಿಯ ಮುಖಾಂತರ ಪ್ಯಾಂಟಿನಲ್ಲಿದ್ದ ಹಣವನ್ನು ದೋಚಿದ್ದಾರೆ.ಕೊಪ್ಪಳ ನಗರ ಪೊ ಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin