ಕಿಟಕಿ ಸರಳು ಮೀಟಿ 4 ಲಕ್ಷ ಹಣ, ಬೆಳ್ಳಿ, ಕಂಪ್ಯೂಟರ್ ದೋಚಿದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

Theft

ಬೆಂಗಳೂರು, ಅ.13– ಮನೆಯ ಕಿಟಕಿವೊಂದರ ಸರಳು ಮೀಟಿ ಒಳನುಗ್ಗಿದ ಚೋರರು 4ಲಕ್ಷ ಹಣ, ಒಂದು ಕೆಜಿ ಬೆಳ್ಳಿ ವಸ್ತುಗಳು ಹಾಗೂ ಒಂದು ಕಂಪ್ಯೂಟರನ್ನು ದೋಚಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಇಎಂಎಲ್ ಲೇಔಟ್‍ನ 4ನೇ ಹಂತ, 5ನೇ ಕ್ರಾಸ್ ನಿವಾಸಿ ಪದ್ಮಾವತಿ ಎಂಬುವರು ಸೆ.28ರಂದು ಮನೆಗೆ ಬೀಗ ಹಾಕಿ ರಾಮನಗರಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ಇವರ ಮನೆಯ ಕಿಟಕಿ ಸರಳು ಮೀಟಿ ಒಳನುಗ್ಗಿ ಬೀರುವನ್ನು ಒಡೆದು ಅದರಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ 4 ಲಕ್ಷ ಹಣ, ಒಂದು ಕೆಜಿ ಬೆಳ್ಳಿ ವಸ್ತುಗಳು ಹಾಗೂ ಕಂಪ್ಯೂಟರನ್ನು ದೋಚಿ ಪರಾರಿಯಾಗಿದ್ದಾರೆ.

ಪದ್ಮಾವತಿ ರಾತ್ರಿ ಮನೆಗೆ ವಾಪಸಾದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.
ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin