ಕಿಡಂಬಿ ಶ್ರೀಕಾಂತ್, ಸೈನಾ ನೆಹ್ವಾಲ್‍ಗೆ ಭರ್ಜರಿ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

saina

ಗೋಲ್ಡ್‍ಕೋಸ್ಟ್ , ಏ.5- ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಕಡಂಬಿ ಶ್ರೀಕಾಂತ್ ಹಾಗೂ ಸೈನಾನೆಹ್ವಾಲ್ ಗೆಲ್ಲುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಕಿಡಂಬಿ ಗೆಲುವು:  ಬ್ಯಾಡ್ಮಿಂಟನ್‍ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್ ಲಂಕಾದ ನಿಲುಕ ಕರುಣಾರತ್ನೆ ರವರನ್ನು 21-16, 21-10 ನೇರ ಸೆಟ್‍ಗಳಿಂದ ಜಯಿಸುವ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾನೆಹ್ವಾಲ್ ಲಂಕಾದ ಮಧುಸಿಕಾ ದಿಲ್‍ರುಕ್‍ಶಿ ವಿರುದ್ಧ 21-8, 21-4 ಸೆಟ್‍ಗಳಿಂದ ಜಯಿಸಿದರು. ಇದಕ್ಕೂ ಮುನ್ನ ನಡೆದ ಪುರುಷರ ಡಬಲ್ಸ್‍ನಲ್ಲಿ ಭಾರತದವರೇ ಆದ ರುತುವಿಕಾ ಶಿವಾನಿ ಹಾಗೂ ಪ್ರಣಾವ್ ಜೆರ್ರಿ ಚೋಪ್ರಾ ಜೋಡಿಯು ಲಂಕಾದ ಸಚಿನ್ ಡೇಯಿಸ್ ಮತ್ತು ಥೈಲಿನಿ ಪ್ರಮೋದಿಕಾ ವಿರುದ್ಧ 21-15, 19-21, 22-20 ರಿಂದ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ. ಮೂರನೇ ಸುತ್ತಿನಲ್ಲಿ ಭಾರತ ಜೋಡಿಯು 18-19,19-19, 20-20 ತೀವ್ರ ಪೈಪೋಟಿ ಎದುರಿಸಿದರೂ ಅಂತಿಮವಾಗಿ 22-20 ಯಿಂದ ಗೆದ್ದು ಬೀಗಿದರು.

ಮಹಿಳೆಯರ ಡಬಲ್ಸ್‍ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ , ಲಂಕಾದ ಥೈಲಿನಿ ಪ್ರಮೋದಿಕಾ ಮತ್ತು ಕವಿದಾ ಸಿರಿಮಂಗ್ನೆ ಜೋಡಿ ವಿರುದ್ಧ 21-12 , 21-14 ನೇರ ಸೆಟ್‍ಗಳಿಂದ ಗೆಲ್ಲುವ ಮೂಲಕ ಲಂಕಾವನ್ನು ಕ್ಲೀನ್‍ಸ್ವೀಪ್ ಮಾಡಿ ಪದಕಗಳನ್ನು ಸೂರೆಗೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.

Facebook Comments

Sri Raghav

Admin