ಕಿಡಗೇಡಿಗಳಿಂದ ಕೋಮುವಾದಿ ಪ್ರಚೋದನೆ : ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

15
ಹುನಗುಂದ,ಫೆ.5– ಮಲ್ಲಿಕಾರ್ಜುನ ನಗರದ ಹನುಮಾನ್ ದೇವಸ್ಥಾನ ಗೋಡೆಗೆ ಶುಕ್ರವಾರ ರಾತ್ರಿ ಕಿಡಗೇಡಿಗಳಿಂದ ಕೋಮುವಾದಿ ಪ್ರಚೋದನೆ ನೀಡುವ ಅವಾಚ್ಯ ಶಬ್ದ ಬರೆದ ಪರಿಣಾಮ ನಿನ್ನೆ ಇಲ್ಲಿ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತ್ತು. ನಿನ್ನೆ ಬೆಳಿಗ್ಗೆ ಅಲ್ಲಿನ ನಿವಾಸಿಗಳಿಂದ ಈ ವಿಷಯ ಬೆಳಕಿಗೆ ಬಂದಿದೆ. ಈ ದೇವಸ್ಥಾನದ ಸುತ್ತ ಬಯಲಿನಲ್ಲಿ ಪ್ರತಿದಿನ ರಾತ್ರಿ ಮಧ್ಯರಾತ್ರಿವರೆಗೂ ಅಲ್ಲಿನ ಯುವಕರು ಹರಟೆ ಹೊಡೆಯುತ್ತಿರುವುದು ಸಾಮಾನ್ಯವಾಗಿದ್ದರೂ ಬೆಳಗ್ಗೆ ದೇವಸ್ಥಾನದ ಗೋಡೆ ಮೇಲೆ ಒಂದು ಧರ್ಮದ ಪರ ಮತ್ತು ಇನ್ನೊಂದು ಧರ್ಮದ ವಿರುದ್ಧ ಅವಾಚ್ಯ ಶಬ್ದ ಬಳಸಿದ ಬರಹ ಮತ್ತು ಪಕ್ಕದಲ್ಲಿ ಇದ್ದ ಬೇವಿನ ಒಂದು ಧರ್ಮದ ಧ್ವಜ ಕಟ್ಟಿದ ವಿಷಯ ತಿಳಿದಿದೆ. ದೇವಸ್ಥಾನಕ್ಕೆ ಅವಹೇಳನ ಮಾಡಿದ ಜಾತಿವಾದಿ ಕಿಡಗೇ ಡಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಶಿಕ್ಷೆಗೆ ಒಳಪಡಿ ಸಬೇಕೆಂದು ಅಲ್ಲಿನ ನಿವಾಸಿ ಆನಂದ ಹವಳಪ್ಪ ನಡುವಿನಮನಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗುಡೂರ ಜಿಪಂ ಸದಸ್ಯ ಶಶಿಕಾಂತ ಪಾಟೀಲ, ಶರಣು ಗೌಡರ, ಪರಶುರಾಮ ಬಿಸಲದಿನ್ನಿ, ಲಕ್ಷ್ಮಣ ಗಾಯಕವಾಡ, ಪ್ರದೀಪ ತಾರಿವಾಳ, ಶೇಖರ ಸಾಳುಂಕಿ, ಸಂಗಮೇಶ ಬದ್ರಶೆಟ್ಟಿ, ಕಿರಣ್ ಅರ್ಜುನಗಿ, ಅನೀಲ ತಾರಿವಾಳ, ಮಂಜು ಸೇಬನ್ನವರ ಇತರರು ಇದ್ದರು. ನಿನ್ನೆ ಮದ್ಯಾಹ್ನ 12ರ ಸುಮಾರಿಗೆ ಕೆಲ ಮುಖಂಡರು ಮತ್ತು ಸಂಘಟನೆಗಳ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಚರ್ಚಿಸಿ ಒಂದು ಧರ್ಮದವರು ಈ ಕಿಡಗೇಡಿ ಕೆಲಸ ಮಾಡಿರಬಹುದು. ನಗರದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ತಪ್ಪಿತಸ್ತರನ್ನು ಗುರುತಿಸಿ ಬಂಧಿಸಬೇಕೆಂದು ಅವರು ಪೊಲೀಸ್ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ.

ನಗರವು ಕೋಮು ಸೌಹಾರ್ಧ ಕೃಷಿ ಪ್ರಧಾನ ನಗರವಾಗಿದ್ದು, ಈ ರೀತಿ ಘಟನೆ ಮೊದಲ ಬಾರಿಗೆ ನಗರದಲ್ಲಿ ಜರುಗಿದೆ. ಸಮಾಜದಲ್ಲಿ ಅಶಾಂತಿ, ದ್ವೇಷ ಭಾವನೆಗಳಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಕಾರ್ಯ ಮಾಡಿರಬಹುದು. ಯಾವುದಕ್ಕೂ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
 – ಜೆ. ಕರುಣೇಶಗೌಡ, ಸಿಪಿಐ

ಇಲ್ಲಿಯವರೆಗೂ ನಗರದಲ್ಲಿ ಪ್ರತಿ ಹಬ್ಬ ಹರಿದಿನ ಗಳನ್ನು ಸೌಹಾರ್ಧಯುತವಾಗಿ ಆಚರಿಸುತ್ತ ಶಾಂತತೆಗೆ ಹೆಸರಾಗಿದೆ. ಈ ಘಟನೆಯಲ್ಲಿ ಪಾಲ್ಗೊಂಡವರು ಯಾರೇ ಆಗಲಿ ಶಿಕ್ಷೆಗೊಳಪಡಿಸಿ ನಗರದಲ್ಲಿ ಮತ್ತೆ ಶಾಂತತೆ ಕಾಪಾಡಬೇಕು.
– ಮಲ್ಲು ಚೂರಿ, ಬಿಜೆಪಿ ಪ್ರಧಾನ ಕಾಯದರ್ಶಿ

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin